ಮೂಡುಬಿದಿರೆಗೆ ಆಗಮಿಸಿದ ಸರಕಾರಿ ಬಸ್
*ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿಯಿದೆ : ಶಾಸಕ ಕೋಟ್ಯಾನ್
ಮೂಡುಬಿದಿರೆ : ಸಾರ್ವಜನಿಕರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಈಗಾಗಲೇ ಸರಕಾರಿ ಪಿ.ಯು, ಡಿಗ್ರಿ ಕಾಲೇಜುಗಳನ್ನು ತೆರೆಯಾಗಿದೆ. ಇದೀಗ ಸರಕಾರಿ ಬಸ್ಸು ಕೂಡಾ ಮೂಡುಬಿದಿರೆಗೆ ಬರುವಂತೆ ಮಾಡಲಾಗಿದ್ದು ಈ ಮೂಲಕ ಆರು ವರ್ಷಗಳ ಹಿಂದೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದಂತ್ತಾಗಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಅವರು ಶನಿವಾರ ಮೂಡುಬಿದಿರೆಗೆ ಆಗಮಿಸಿದ ಸರಕಾರಿ ಬಸ್ ನ್ನು ವಿದ್ಯಾಗಿರಿಯಲ್ಲಿ ಸ್ವಾಗತಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ಮೂಡುಬಿದಿರೆಯ ಜನತೆಯ ಆಗ್ರಹದ ಮೇರೆಗೆ 7-8 ಸರಕಾರಿ ಬಸ್ ಗಳ ಪರ್ಮೀಟ್ ಬೇಕೆಂದು ಬೇಕೆಂದು ಮನವಿ ಸಲ್ಲಿಸಲಾಗಿತ್ತು ಆದರೆ ಖಾಸಗಿ ಬಸ್ ನವರು ಕೋಟ್ ೯ಗೆ ಹೋಗಿದ್ದರಿಂದ ಬಾಕಿ ಉಳಿದಿತ್ತು ಆದರೆ ಅನೇಕ ಪ್ರಯತ್ನ ಮತ್ತು ಬಹಳ ಒತ್ತಡ ಮಾಡಿರುವುದರಿಂದ ಇದೀಗ ನಾಲ್ಕು ಬಸ್ ಗಳಿಗೆ ಪರ್ಮೀಟ್ ಸಿಕ್ಕಿದೆ ಈ ಮೂಲಕ ಶಾಸಕನಾಗಿ ಸಾರ್ವಜನಿಕರ ಭರವಸೆಯನ್ನು ಈಡೇರಿಸಿದ ತೃಪ್ತಿಯಿದೆ ಎಂದರು.
ಇದೀಗ ಪರ್ಮೀಟ್ ಸಿಕ್ಕಿರುವ ಬಸ್ ಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ಗಳಿಗೆ ಪರ್ಮೀಟ್ ತೆಗೆದುಕೊಳ್ಳಲಾಗುವುದೆಂದ ಅವರು ಕಿಸಾನ್ ಸಂಘ, ಭಾರತೀಯ ರೈ.ಸಂಘ, ನೇತಾಜಿ ಬ್ರಿಗೇಡ್ ಮತ್ತು ಜವನೆರ್ ಬೆದ್ರ ಸಂಘಟನೆಯವರು ಕೂಡಾ ಮೂಡುಬಿದಿರೆ ಸರಕಾರಿ ಬಸ್ ಬೇಕೆಂದು ಮನವಿ ನೀಡಿದ್ದರು ಇವೆಲ್ಲರ ಸಹಕಾರವು ಸಿಕ್ಕಿದರಿಂದ ಸರಕಾರಿ ಬಸ್ ನ್ನು ಬರುವಂತೆ ಮಾಡಲು ಸಹಕಾರಿಯಾಯಿತು. ಸಹಕರಿಸಿದ ಇಲಾಖೆಯ ಅಧಿಕಾರಿಗಳಿಗೆ, ಸರಕಾರಕ್ಕೆ ಮತ್ತು ಸಾರಿಗೆ ಸಚಿವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಬಿಜೆಪಿ ಮಂಡಲದ ಕಾರ್ಯದರ್ಶಿ ರಂಜಿತ್ ಪೂಜಾರಿ, ನಾಗವರ್ಮ ಜೈನ್, ಈಶ್ವರ್ ಕಟೀಲ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments