ಮೂಡುಬಿದಿರೆಗೆ ಆಗಮಿಸಿದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಸ್ವಾಗತಿಸಿ, ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು
ಮೂಡುಬಿದಿರೆ: ಕರ್ನಾಟಕ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಮಂಗಳೂರು-ಮೂಡುಬಿದಿರೆ-ಕಾರ್ಕಳಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಅನುಮೋದನೆ ಸಿಕ್ಕಿ ಶನಿವಾರ ಇಂದು ಅಧಿಕೃತವಾಗಿ ಚಾಲನೆಗೊಂಡ ಹಿನ್ನೆಲೆಯಲ್ಲಿ ಮೂಡುಬಿದಿರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ವಾಗತಿಸಿ ಸಂಭ್ರಮವನ್ನಾಚರಿಸಿಕೊಂಡರು.
ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಮೂಡುಬಿದಿರೆಗೆ ಬಂದ ಬಸ್ಸನ್ನು ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ,ಕೊರಗಪ್ಪ,ಸುರೇಶ್ ಪ್ರಭು,ಇಕ್ಬಾಲ್ ಕರೀಮ್,ಮಮತಾ ಆನಂದ್,ಸುರೇಶ್ ಕೋಟ್ಯಾನ್, ಗ್ಯಾರಂಟಿ ಯೋಜನಾ ಸದಸ್ಯರಾದ ಪುರುಷೋತ್ತಮ ನಾಯಕ್ ಪುತ್ತಿಗೆ, ಹರೀಶ್ ಆಚಾರ್ಯ, ಶಿವಾನಂದ ಪಾಂಡ್ರು,ರಜನಿ,ಗಣೇಶ್, ಮುಡಾ ಸದಸ್ಯರಾದ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ,ಮುಖಂಡರಾದ ಚಂದ್ರಹಾಸ ಸನಿಲ್,ಪ್ರವೀಣ್ ಶೆಟ್ಟಿ ಪುತ್ತಿಗೆ,ಟಿ.ಎನ್.ಕೆಂಬಾರೆ,ಅನಿಲ್ ಲೋಬೊ,ಬಾಲಕೃಷ್ಣ ಅಶ್ವತ್ಥಪುರ,ರಾಜೇಶ್ ಕಡಲಕೆರೆ,ಅನಿಶ್ ಬೆಳುವಾಯಿ, ಶೌಕತ್ ಬೆಳುವಾಯಿ, ಪ್ರವೀಣ್ ಇರುವೈಲ್,ಅಶ್ಫಾಕ್ ಮಿಜಾರ್, ಸಂತೋಷ್ ಶೆಟ್ಟಿ ಮಿಜಾರ್, ಇಬ್ರಾಹಿಂ, ಅಲ್ತಾಫ್ ,ಕುಮಾರ್,ಸತೀಶ್ ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments