ಅಸಹಾಯಕ ಕುಟುಂಬಕ್ಕೆ ಸಾಯಿ ಮಾರ್ನಾಡ್ ನಿಂದ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ಅಸಹಾಯಕ ಕುಟುಂಬಕ್ಕೆ ಸಾಯಿ ಮಾರ್ನಾಡ್ ನಿಂದ ನೆರವು 

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 

45ನೇ ಸೇವಾ ಯೋಜನೆಯ ಅಂಗವಾಗಿ ಅಕ್ಟೋಬರ್ ತಿಂಗಳ ಎರಡನೇ ಸೇವಾ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನ ಸುಲ್ಕೆರಿ ಗ್ರಾಮದ ಮುಡುಪೆರೆ ಮನೆಯ ನವೀನ್ ಬಿನ್ ಸಂಜೀವ ಪೂಜಾರಿ ಅವರಿಗೆ  ಆರ್ಥಿಕ ನೆರವು ನೀಡಲಾಯಿತು.


ಸುಲ್ಕೆರಿ ಗ್ರಾಮದ  ನವೀನ್ ಬಿನ್ ಸಂಜೀವ ಪೂಜಾರಿ ಇವರು ಮೊದಲು 10ಜನರನ್ನು ದುಡಿಸುತ್ತಿದ್ದು,ಮದುವೆ ಆದ ಸ್ವಲ್ಪ ಸಮಯ ದ ನಂತರ 70%ಅಂಗವಿಕಲರಾಗಿರುತ್ತಾರೆ. ಇವರಿಗೆ ಒಂದು ಹೆಣ್ಣು ಮಗುವಿದ್ದು 4ನೇ ತರಗತಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಈಕೆಯೂ ಅಂಗವಿಕಲರಾಗಿರುವುದರಿಂದ ಇವರಿಗೆ ಕೆಲಸಕ್ಕೆ ಹೋಗಲು ಆಗದೇ ಇರುವುದರಿಂದ ಮಗುವನ್ನು ಹೆಂಡತಿಯು ಅವರ ತವರು ಮನೆಯಲ್ಲಿ ಸಾಕುತ್ತಿದ್ದಾರೆ. 


ನವೀನ್ ಅವರ ಮನೆಯಲ್ಲಿ ಇವರ ತಂಗಿ, ತಂಗಿ ಮಗಳು 6ನೇ ತರಗತಿ ಹಾಗೂ ಅಮ್ಮ ಇದ್ದಾರೆ. ಅಮ್ಮನಿಗೆ ಹುಷಾರಿಲ್ಲದೆ ಹಾಸಿಗೆಯಲ್ಲಿ ಇದ್ದಾರೆ. ಹಾಗೂ ತಂಗಿಗೆ ಮದುವೆ ಆಗಿದ್ದು ಇವರ ಗಂಡ ವಿಪರೀತ ಕುಡುಕನಾಗಿದ್ದು ಇವರನ್ನು ಬಿಟ್ಟು ಹೋಗಿ 10ವರ್ಷ ವಾಗಿದೆ.ಇವರ ಮನೆಯಲ್ಲಿ ದುಡಿಯುವವರು ಯಾರೂ ಇಲ್ಲದೆ ಒಂದು ಹೊತ್ತಿನ ಊಟಕ್ಕಾಗಿ ತೊಂದರೆ ಅನುಭವಿಸುತ್ತಿದ್ದಾರೆ.  ಈ ಕುಟುಂಬವು ರೇಷನ್ ಅಕ್ಕಿ ಯನ್ನು ಊಟ ಮಾಡಿ ಜೀವನ ಸಾಗಿಸುತ್ತಾ  ತಂಗಿ ಮತ್ತು ತಾಯಿಯನ್ನು ನೋಡಿಕೊಳ್ಳುತ್ತಿದ್ದು ಇವರ ಮನೆಯ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.  ಇವರ ದೈನಂದಿನ ಖರ್ಚು ಹಾಗೂ ಔಷಧದ ಖರ್ಚು ಮನೆಯ ಆರ್ಥಿಕ ಪರಿಸ್ಥಿತಿ ಹಾಗೂ ಔಷಧಕ್ಕಾಗಿ ಸಹಾಯ ಮಾಡುವ ನಿಟ್ಟಿನಲ್ಲಿ 

  ಅಕ್ಟೋಬರ್ ತಿಂಗಳ 2ನೇ ಸೇವಾಯೋಜನೆಯನ್ನು ಹಸ್ತಾಂತರಿಸಿದೆ.

Post a Comment

0 Comments