*ಜಿನ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ*

ಜಾಹೀರಾತು/Advertisment
ಜಾಹೀರಾತು/Advertisment

 *ಜಿನ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ* 


ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್,ಬೆಳ್ತಂಗಡಿ ಶಾಖಾ ವತಿಯಿಂದ,ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯು ಬೆಳ್ತಂಗಡಿಯ ಮಂಜುನಾಥ ಸ್ವಾಮಿ ಕಲಾ ಮಂಟಪದಲ್ಲಿ ದಿನಾಂಕ 24/11/24 ನೇ ಭಾನುವಾರ ಜರಗಲಿದೆ, ಈ ಕಾರ್ಯಕ್ರಮವನ್ನು ಪೂಜ್ಯ ಡಾ, ಡಿ. ವೀರೇಂದ್ರ ಹೆಗ್ಗಡೆಯವರು  ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪೂಜ್ಯ ಹೆಗ್ಗಡೆಯವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್,ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್,ವಲಯ ನಿರ್ದೇಶಕರಾದ ವೀರ್ ಬಿ. ಸೋಮ ಶೇಖರ ಶೆಟ್ಟಿ,ವೀರ್ ಬಿ. ಪ್ರಮೋದ್ ಕುಮಾರ್,ವಿಭಾಗದ ಜೊತೆ ಕಾರ್ಯದಶಿಗಳಾದ ವೀರಾಂಗನ ಶ್ವೇತಾ ಮೂಡಬಿದ್ರಿ,ವೀರಾಂಗ ನ ಶಶಿಕಲಾ ಕಾರ್ಕಳ,ಮಿಲನ್ ಅಧ್ಯಕ್ಷರಾದ ವೀರ್ ನವೀನ್ ಕುಮಾರ್ ಜೈನ್,ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ಜೈನ್,ಖಜಾಂಜಿ ವೀರ್ ನಿಖಿತ್ ಕುಮಾರ್ ಜೈನ್,ವೀರ್ ಭುಜ ಬಲಿ,ವೀರ್ ಜೀವಂಧರ್ ,ವೀರ್, ಪ್ರಶಾಂತ್ ಕುಮಾರ್, ವೀರ್ ಧರ್ಮರಾಜ,ವೀರ್ ರತ್ನವರ್ಮ ಜೈನ್.ವೀರ್ ಪಾರ್ಶ್ವನಾಥ ಜೈನ್,ವೀರ್ ದೀಪಕ್ ಕುಮಾರ್,ವೀರಾಂಗನಾ ರಜತ, ಶಶಿಪ್ರಭ,ವೀರಾಂಗನ ಕರ್ತವ್ಯ ಜೈನ್,ವೀರ್ ದೀಕ್ಷಿತ್ ಜೈನ್,ಉಪಸ್ಥಿತರಿದ್ದರು, ಜೈನ್ ಮಿಲನ್ ಮಾರ್ಗದರ್ಶಕರಾದ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರು, ಶ್ರೀ ಡಿ . ಹರ್ಷೇಂದ್ರ ಕುಮಾರ್,ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರೀಮತಿ ಸೋನಿಯಾ ಯಶೋವರ್ಮ, ಶ್ರೀ ಡಿ, ನಿಶ್ಚಲ್ ಕುಮಾರ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಮಂತ್ರಿಸಲಾಯಿತು.

Post a Comment

0 Comments