ಸಾಮೂಹಿಕ ಗೋಪೂಜೆ, ಭಜನಾ ಸಂಕೀರ್ತನೆ
ಮೂಡುಬಿದಿರೆ : ಶ್ರೀ ಕುಂಭಕಂಠಿನಿ ಭಜನಾ ಮಂಡಳಿ ಅಚ್ಚರಕಟ್ಟೆ ಪಡುಮಾರ್ನಾಡ್ ಇದರ ವಿದ್ಯಾರ್ಥಿಗಳಿಂದ ದೀಪಾವಳಿ ಆಚರಣೆ, ಮಹಿಳಾ ಮಂಡಳಿಯಿಂದ ಸಾಮೂಹಿಕ ಗೋಪೂಜೆ, ಮತ್ತು ಮಹಿಳೆಯರಿಗೆ ಭಜನಾ ಸಂಕೀರ್ತನೆ ಮತ್ತು ಮಕ್ಕಳ ಕುಣಿತ ಭಜನೆಯ ಪ್ರಾತ್ಯಕ್ಷತೆ ನಡೆಯಿತು.
ಉಪನ್ಯಾಸಕರಾಗಿ ದ. ಕ. ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್. ಪಿ. ಅಳಿಯೂರು, ಅತಿಥಿಗಳಾಗಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಲಕ್ಷ್ಮಣ್ ಸುವರ್ಣ, ಜಗತ್ಪಲ್ ಎಸ್ ಹೆಗ್ಡೆ, ಅಶೋಕ್ ನಾಯ್ಕ್ ಕಳಸಬೈಲ್, ಶಿವರಾಮ್ ಪೂಜಾರಿ ಕಡಂದಲೆ, ಮಹಿಳಾ ಮಂಡಲ ಅಧ್ಯಕ್ಷೆ ಸೌಮ್ಯ ಬಡಕೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಮೂಲ್ಯ , ಸೇವಾನಿರತೆ ಉಷಾ ಕಿರಣ್ ಮಾಳ, ವಲಯಾಧ್ಯಕ್ಷರು ಸದಾನಂದ್ ಕುಲಾಲ್, ರಾಜೇಶ್ ತುರ್ಕೇರ ಬೆಟ್ಟು ಉಪಸ್ಥಿತರಿದ್ದರು.
ಸಂಚಾಲಕ ಪ್ರವೀಣ್. ಆರ್. ಕೋಟ್ಯಾನ್ ನಿರೂಪಿಸಿದರು.
0 Comments