ಬಂಟ್ವಾಳ ಕೊಯ್ಲ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ಮಾಹಿತಿ

ಜಾಹೀರಾತು/Advertisment
ಜಾಹೀರಾತು/Advertisment

 ಬಂಟ್ವಾಳ ಕೊಯ್ಲ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ಮಾಹಿತಿ 

ಮೂಡುಬಿದಿರೆ:  ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಕೊಯ್ಲದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿ ಕಾರ್ಯಕ್ರಮ ನವೆಂಬರ್ 25 ರಂದು ನಡೆಯಿತು.


 ಬೆಂಗಳೂರು ಸೂರ್ಯ ಫೌಂಡೇಶನ್ ನ ದ.ಕ.ಜಿಲ್ಲಾ ಸಂಯೋಜಕ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ  ರಾಯಿ ರಾಜಕುಮಾರ ಅವರು ಗ್ರಾಹಕ ಮಾಹಿತಿಯನ್ನು ನೀಡಿದರು. ಅವರು ತಮ್ಮ ಭಾಷಣದಲ್ಲಿ ಗ್ರಾಹಕ ಶಿಕ್ಷಣದ ಅಗತ್ಯ, ಗ್ರಾಹಕ ಹಿತ ಕಾಪಾಡಲು ಕಾಯಿದೆಯ ಮುಖ್ಯ ಅಂಶಗಳು, ಮಾಹಿತಿ ಹಕ್ಕು ಕಾಯಿದೆ ಇತ್ಯಾದಿ ಎಲ್ಲಾ ರೀತಿಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. 


 ಶಾಲಾ ಮುಖ್ಯ ಶಿಕ್ಷಕಿ  ಸೌಜನ್ಯ ಹಾಜರಿದ್ದರು. ಗ್ರಾಹಕ ಕ್ಲಬ್ ಸಂಚಾಲಕಿ ಆಶಾಲತಾ ಸ್ವಾಗತಿಸಿದರು. ಅಧ್ಯಾಪಕ ಜನಾರ್ದನ ಮಯ್ಯ ವಂದಿಸಿದರು.

Post a Comment

0 Comments