ಗುಂಡ್ಯಡ್ಕ: ಇಂದು ಭಜನ ಸಪ್ತಾಹ ಸಮಾರೋಪ.
ದಕ್ಷಿಣ ಕನ್ನಡ : ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ, ಶ್ರೀನಿವಾಸಪುರ ಗುಂಡ್ಯಡ್ಕ, ಅಂಚೆ ಬಾನಂಗಡಿ, ಮೂಡುಬಿದರೆ ತಾಲೂಕು ಇಲ್ಲಿ 78ನೇ ಭಜನ ಸಪ್ತಾಹ, ದಿನಾಂಕ 9.11.2024 ರಿಂದ ಆರಂಭಗೊಂಡು ದಿನಾಂಕ 15 11 2018 ರವರೆಗೆ ಆಚರಿಸುತ್ತಿದ್ದು, ದಿನಾಂಕ 15 ರಂದು ರಾತ್ರಿ 9 ಗಂಟೆಗೆ ಭಜನ ಸಪ್ತಾಹದ ಮಂಗಳೋತ್ಸಮವು ಜರಗಲಿರುವುದು
ದಿನಾಂಕ 15 ರಂದು ಪ್ರಾತಃಕಾಲ ನವಕ ಪ್ರಧಾನ ಹೋಮ, ಸಿಯಾಳ ಅಭಿಷೇಕ, ಕಲಶಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂಪರ್ಪಣೆ ಹಾಗೂ ಸಾಯಂಕಾಲ 6 ರಿಂದ ದೀಪಾ ಆರಾಧನೆ, ಪಲ್ಲಕ್ಕಿ ಸೇವೆ, ಅಸ್ತಾವಧಾನ ಸೇವೆ, ಬಳಿಕರಾತ್ರಿ 9 ಗಂಟೆಗೆ ಭಜನಾ ಮಂಗಲ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು,
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವಿಠೋಬಾ ರುಕುಮಾರಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ವಿಠೋಬ ಭಜನಾ ಮಂಡಳಿ ಟ್ರಸ್ಟ್ ಇವರು ಕೇಳಿಕೊಂಡಿದ್ದಾರೆ.
0 Comments