ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲ್ ಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ
ಮೂಡುಬಿದಿರೆ: ಕಲಾಭೂಮಿ ಪ್ರತಿಷ್ಠಾನ ರಿ. ಬೆಂಗಳೂರು ಇದರ ವತಿಯಿಂದ ಕೊಡಲ್ಪಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲು ಆಯ್ಕೆಯಾಗಿದ್ದಾರೆ.
ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ , ಜನಪದ ಮತ್ತು ಜನಪದ ಸೇವೆಯಲ್ಲಿ ಗುರುತಿಸಿ ನೀಡಲ್ಪಡುವ,
ಕುಣಿತ ಭಜನೆ, ಸಂಗೀತ, ಕ್ರೀಡೆ, ಪರಿಸರ ಮತ್ತು ನೃತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕುಣಿತ ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲು ಇವರಿಗೆ ನ.29 ರಂದು ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕಲಾಭೂಮಿ ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.
0 Comments