ಮಾನಸಿಕ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಮುಖ್ಯ ಡಾಕ್ಟರ್ ಪಿ ವಿ ಭಂಡಾರಿ

ಜಾಹೀರಾತು/Advertisment
ಜಾಹೀರಾತು/Advertisment

 ಮಾನಸಿಕ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಮುಖ್ಯ ಡಾಕ್ಟರ್ ಪಿ ವಿ ಭಂಡಾರಿ 

ವ್ಯಕ್ತಿಯ ಸಮತೋಲಿತ ಜೀವನ ನಿರ್ವಹಣೆಗೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡು  ಅತ್ಯಗತ್ಯ ಅಂತ ವ್ಯಕ್ತಿ ಮಾತ್ರ ಸಾಧನೆಗಳನ್ನು ಮಾಡಲು ಸಾಧ್ಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುವುದು ಅಗತ್ಯ ಅದು ಇಲ್ಲದೇ ಇರುವುದರಿಂದಲೇ ಸಮಾಜದಲ್ಲಿ ಚಿತ್ರ ವಿಚಿತ್ರ ಘಟನೆಗಳು ಜರುಗುತ್ತಿವೆ ಎಂಬುದಾಗಿ ಉಡುಪಿ ದೊಡ್ಡಣ್ಣ ಗುಡ್ಡೆಯ ಡಾಕ್ಟರ್ ಎವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾಕ್ಟರ್ ಪಿ v ಬಂಡಾರಿಯವರು ಮೂಡುಬಿದರೆ ಜೈನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಒತ್ತಡ ರಹಿತ ವಾತಾವರಣ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ವಿಶಿಷ್ಟ ಸಂಸ್ಥೆ ಎಂಬುದಾಗಿ ಜೈನ ಪದವಿಪೂರ್ವ ಕಾಲೇಜಿನ ಅಭಿನಂದಿಸಿದರು 


ಕಳೆದ ಒಂದು ದಶಕದಿಂದ ನಿರಂತರವಾಗಿ ಈ ಸಂಸ್ಥೆಗೆ ಭೇಟಿ ನೀಡುತ್ತಿರುವ ಶ್ರೀಯುತರು ಬೆಳಗಿನ ಹೊತ್ತು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನಂತರ ಹೆತ್ತವರಿಗೆ ಮಾರ್ಗದರ್ಶನ ನೀಡಿದರು .ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡು ಅಧ್ಯಕ್ಷತೆ ವಹಿಸಿದ್ದರು .ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರ ಸಂದೇಹಗಳಿಗೆ ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದರು .ಉಪನ್ಯಾಸಕರಾದ ಶ್ರೀ ಮಹಾವೀರ ಜೈನ ಸ್ವಾಗತಿಸಿ...ಕುಮಾರಿ ಅಪೂರ್ವ  ಆಳ್ವ ಅತಿಥಿಗಳನ್ನು ಪರಿಚಯಿಸಿದರು  ಶ್ರೀರಾಮಚಂದ್ರ ಭಟ್ ವಂದಿಸಿದರು

Post a Comment

0 Comments