ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ 'GIGGLE & GROW' ಮಕ್ಕಳ ಆಟದ ಮನೆ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ 'GIGGLE & GROW' ಮಕ್ಕಳ ಆಟದ ಮನೆ ಉದ್ಘಾಟನೆ

ಮೂಡುಬಿದಿರೆ:  ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ ನೂತನ "GIGGLE & GROW' ಆಟದ ಮನೆಯನ್ನು ದಸರಾ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.


ಮಕ್ಕಳು ದೇವರ ಸ್ವರೂಪ. ಪುಟ್ಟ ಮಕ್ಕಳು ಆಡುತ್ತ, ನಲಿಯುತ್ತ ಬೆಳೆಯಬೇಕೆಂಬುದು ಹಿರಿಯರೆಲ್ಲರ ಅಭಿಲಾಷೆ. ಆ ಮಕ್ಕಳಿಗೆ ಹೇಗೆ ಮನೆಯಲ್ಲಿ ತಾಯಿಯ ರಕ್ಷಣೆ ಸಿಗುತ್ತದೋ ಹಾಗೆ ಅವರ ಆಟಪಾಟಗಳಲ್ಲಿ ಆ ಮಹಾತಾಯಿ ದುರ್ಗಾದೇವಿಯ ಅನುಗ್ರಹ ಪ್ರತಿದಿನವೂ ಪ್ರಾಪ್ತವಾಗುತ್ತಿರಬೇಕೆಂಬ ಸದಾಶಯದಿಂದ ನಿರ್ಮಿಸಲಾಗಿರುವ ಆಟದ ಮನೆಯನ್ನು ಮಂಜುಳಾ ಅಭಯಚಂದ್ರ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು.


  ಸಂಸ್ಥೆಯ ಅಧ್ಯಕ್ಷ  ಯುವರಾಜ್ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಒಬ್ಬ ವ್ಯಕ್ತಿ ಸಾಧನೆಯ ಗುರಿ ತಲುಪಬೇಕಾದರೆ ದೇವರ ಅನುಗ್ರಹ ಅತೀ ಅಗತ್ಯ. ಆ ನಿಟ್ಟಿನಲ್ಲಿ ನವರಾತ್ರಿಯ ಈ ಸುಸಂದರ್ಭದಲ್ಲಿ ಒಂಭತ್ತು ಮಹಿಳೆಯರಿಂದ ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.


ನವರಾತ್ರಿ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪರಿಸರದಲ್ಲಿ ಮಹತ್ವದ ಸಾಧನೆಗಳಿಂದ ಗುರುತಿಸಿಕೊಂಡಿರುವ ಒಂಬತ್ತು ಶ್ರೇಷ್ಠ ಮಹಿಳೆಯರಾದ  ಮೀನಾಕ್ಷಿ ನಾರಾಯಣ,  ಮುನಾವರ,  ಪ್ರಕಾಶಿನಿ ಹೆಗ್ಡೆ., ವೈಲೆಟ್ ಡಿಸೋಜ, ಅಪೇಕ್ಷ ಪೂರ್ಣಚಂದ್ರ,  ಬಿಂದಿಯಾ ಶರತ್ ಶೆಟ್ಟಿ, ರಮ್ಯಾ ವಿಕಾಸ್,  ಸರಿತಾ ಆಶೀರ್ವಾದ್, ಹಾಗೂ  ಸಾರಿಕಾ ಬಂಗೇರ ಅವರನ್ನು ಗುರುತಿಸಿ ಗೌರವಿಸಲಾಯಿತು.


 ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸುವುದು ಅತ್ಯಗತ್ಯ ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಿ.ಬಿ.ಎಸ್.ಇ ಸಂಸ್ಥೆಯು ಮಕ್ಕಳ ಆಟೋಟ ಚಟುವಟಿಕೆಗಳಿಗಿ ಬೇಕಾದ ಎಲ್ಲಾ ಸೌಕಾರ್ಯಗಳನ್ನು ನೀಡುತ್ತಾ ಬಂದಿದೆ ಎಂದರು.

  

 ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್‌ ಅವರು  ವಂದಿಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕರು,

ಪ್ರಾಂಶುಪಾಲರು, ಶೈಕ್ಷಣಿಕ ಸಂಯೋಜಕರು ಹಾಗೂ ಸಿಬ್ಬಂದಿಗಳು, ಪುಟಾಣಿಗಳು ಉಪಸ್ಥಿತರಿದ್ದರು.

Post a Comment

0 Comments