ಮೂಡುಬಿದಿರೆ ಪುರಸಭೆಗೆ ಸ್ವಚ್ಛತೆಯೇ ಸೇವೆ ಪುರಸ್ಕಾರ
ಮೂಡುಬಿದಿರೆ: ನಗರಾಭಿವೃದ್ಧಿ ಇಲಾಖೆ,ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ,ದ.ಕ.ಜಿಲ್ಲೆ ಸ್ವಚ್ಛ ಭಾರತ್ ಮಿಷನ್ ( ನಗರ) ವತಿಯಿಂದ ನಡೆದ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಉತ್ತಮವಾಗಿ ಕಾರ್ಯಕ್ರಮಗಳನ್ನು ನಡೆಸಿರುವ ಮೂಡುಬಿದಿರೆ ಪುರಸಭೆಗೆ ಮಂಗಳೂರಿನಲ್ಲಿಂದು ನಡೆದ ಕಾರ್ಯಕ್ರಮದಲ್ಲಿ 'ಸ್ವಚ್ಛತೆಯೇ ಸೇವೆ ಪುರಸ್ಕಾರ'ನೀಡಿ ಗೌರವಿಸಲಾಯಿತು .
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಜಿ.ಪಂ.ಸಿ.ಇ.ಒ ಆನಂದ್ ,ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರು ಪ್ರಶಸ್ತಿ ಸ್ವೀಕರಿಸಿದರು.
0 Comments