ಮೂಡುಬಿದಿರೆ ದಸರಾ ಸಾಹಿತ್ಯ ಸಾಂಸ್ಕೃತಿಕ ಉತ್ಸವ
*ಆಗುಂಬೆ ಎಸ್. ನಟರಾಜ್ ಗೆ ವರ್ಧಮಾನ ಸಾಹಿತ್ಯ ಹಾಗೂ ಶ್ರೀಧರ ಬನವಾಸಿಗೆ ವರ್ಧಮಾನ ಉದಯೋ ನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ ನಡೆಯುತ್ತಿರುವ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ 2ನೇ ದಿನವಾದ ಶುಕ್ರವಾರದಂದು ಆಗುಂಬೆ ಎಸ್. ನಟರಾಜ್ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಶ್ರೀಧರ ಬನವಾಸಿ ಅವರಿಗೆ ವರ್ಧಮಾನ ಉದಯೋ ನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪೀಠದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಆಗುಂಬೆ ಎಸ್. ನಟರಾಜ ಅವರು 2023ರ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ, 25 ಸಾವಿರ ರು. ನಗದು ಪುರಸ್ಕಾರ ಸ್ವೀಕರಿಸಿ ಮಾತನಾಡಿ ಇತಿಹಾಸ ಪ್ರಜ್ಞೆ, ಸೌಂದರ್ಯ ಪ್ರಜ್ಞೆ ಯ ಕೊರತೆಯಿಂದ ಸಮಾಜ ಬಳಲುತ್ತಿದೆ. ಇತಿಹಾಸವಿಲ್ಲದೇ ಬದುಕಿಲ್ಲ ಎನ್ನುವ ವಾಸ್ತವವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ. ಶಿವರಾಮ ಕಾರಂತರ ಕೃತಿಗಳನ್ನು ಓದಿ ಸಾಹಿತ್ಯ ರಂಗಕ್ಕೆ ಪ್ರವೇಶಿಸುವ ಅವಕಾಶ ಪಡೆದ ನನಗೆ ಅವರ ಜಿಲ್ಲೆಯಲ್ಲೇ ಕಾರಂತ ಪ್ರಶಸ್ತಿ ಪಡೆದ ಬಳಿಕ ವರ್ಧಮಾನ ಪ್ರಶಸ್ತಿಯ ಗೌರವ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಶ್ರೀಧರ್ ಬನವಾಸಿ ಅವರು ಸ್ವೀಕರಿಸಿದ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು 15 ಸಾವಿರ ರು. ನಗದು ಪುರಸ್ಕಾರವನ್ನು ಒಳಗೊಂಡಿತು.
ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.ನೇಮಿರಾಜ್ ಶೆಟ್ಟಿ ವಂದಿಸಿದರು.
ನಂತರ ಸರ್ವೇಶ್ ಜೈನ್ ಶ್ರವಣಬೆಳಗೊಳ ಇವರಿಂದ ಸುಗಮ ಸಂಗೀತ ನಡೆಯಿತು.
.
0 Comments