ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಿಂದ ಜಾಗೃತಿ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

 ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಿಂದ ಜಾಗೃತಿ ಜಾಥಾ

ಮೂಡುಬಿದಿರೆ: ಗಾಂಧಿ ಜಯಂತಿ ಪ್ರಯುಕ್ತ ಇಲ್ಲಿನ ಸ್ಪೂರ್ತಿ ವಿಶೇಷ ಸಾಮಥ್ಯ ೯ದ ಮಕ್ಕಳ ಶಾಲೆಯ ನೇತೃತ್ವದಲ್ಲಿ  ಪುರಸಭೆ ಮತ್ತು ತೋಡಾರು ಯೆನಪೋಯ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಸ್ವರಾಜ್ಯ ಮೈದಾನದಿಂದ ವೆಂಕಟರಮಣ ದೇವಳದವರೆಗೆ  ಜಾಗೃತಿ ಜಾಥಾ ನಡೆಯಿತು.


 ಆಲಂಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಜೆಸಿಂತ್ ಡಿ'ಮೆಲ್ಲೋ ಜಾಥಾಕ್ಕೆ ಚಾಲನೆಯನ್ನು ನೀಡಿದರು.

  ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಇದರ  ಸುನಿಲ್ ಮೆಂಡೋನ್ಸಾ,  ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯಕುಮಾರ್, ಪುರಸಭೆಯ ಅಧಿಕಾರಿಗಳು,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್, ಸ್ಪೂರ್ತಿ ವಿಶೇಷ ಸಾಮಥ್ಯ ೯ದ  ಮಕ್ಕಳ ಶಾಲೆಯ ಸ್ಥಾಪಕಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್, ಪೊಲೀಸ್ ಉಪ ನಿರೀಕ್ಷಕ ಕೃಷ್ಣಪ್ಪ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸದಾಶಿವ ಶೆಟ್ಟಿಗಾರ್ ಗೊಳಿಜೋರ, ಮಕ್ಕಳ ಹೆತ್ತವರು ಮತ್ತಿತರರು ಪಾಲ್ಗೊಂಡಿದ್ದರು.

ಜಾಥಾದ ನಂತರ ಶಾಲೆಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪರ್ಚನೆ ಗೈಯ್ಯಲಾಯಿತು.

Post a Comment

0 Comments