ಜೈನ್ ಮಿಲನ್ ಲಂಡನ್ ಇದರ ವಾರ್ಷಿಕ ಸಭೆಯು ಶಾಂತಿನಾಥ ದಿಗಂಬರ ಜೈನ ಬಸದಿ , Slough, ಇಂಗ್ಲೆಂಡ್ ನಲ್ಲಿ 28 ಸೆಪ್ಟೆಂಬರ್ ಶನಿವಾರ ನಡೆಯಿತು.

ಜಾಹೀರಾತು/Advertisment
ಜಾಹೀರಾತು/Advertisment

 ಜೈನ್ ಮಿಲನ್ ಲಂಡನ್ ಇದರ ವಾರ್ಷಿಕ ಸಭೆಯು ಶಾಂತಿನಾಥ ದಿಗಂಬರ ಜೈನ ಬಸದಿ , Slough, ಇಂಗ್ಲೆಂಡ್ ನಲ್ಲಿ 28 ಸೆಪ್ಟೆಂಬರ್ ಶನಿವಾರ ನಡೆಯಿತು.


ಮೊದಲಿಗೆ ವಿಜಯ್ ಭಯ್ಯಾಜಿ ಅವರ ಮಾರ್ಗದರ್ಶನದಲ್ಲಿ ಅಭಿಷೇಕ,ಪೂಜಾ ಕಾರ್ಯಕ್ರಮ ಗಳು ನಡೆದವು .

ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆಯನ್ನು  ವಹಿಸಿದ್ದ ಜೈನ್ ಮಿಲನ್ ಅಧ್ಯಕ್ಷ Dr. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು .

ಮಿಲನ್ ಸದಸ್ಯರು ಪ್ರಾರ್ಥನೆ ಹಾಗೂ ಸಾಮೂಹಿಕ ಪಂಚ ನಮಸ್ಕಾರ ಪಠಣ ದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು .

ಆರವ್ ಜೈನ್ ಅವರು ಜೈನ ಧರ್ಮದ ಮಹತ್ವದ ಬಗ್ಗೆ ಮಾತನಾಡಿದರು .

ಕೈವಲ್ಯ ಮತ್ತು ಕೇವಲ್ ಜೈನ್ ಪಂಚ ಪರಮೇಸ್ಟಿ ಸ್ತುತಿ ಹಾಡಿದರು.

ಸಾರ್ಥಕ್ ಜೈನ್ ಜಿನ ಭಜನೆ ಹಾಡಿದರು .

ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ದೀಪಾವಳಿ ಆಚರಣೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಲಾಯಿತು .

ಮಿಲನ್ ಉಪಾಧ್ಯಕ್ಷ ನಿಖಿಲ್ B.A ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿದರು .

ಕೋಶಾಧಿಕಾರಿ Dr. ವೈಶಾಕ್ ಬಲ್ಲಾಳ್ ವಂದಿಸಿದರು.

ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿ , ಸಭಾ ಕಾರ್ಯಕ್ರಮ ದ ನಂತರ ಸದಸ್ಯರಿಗೆ ಮೋಜಿನ ಸ್ಪರ್ಧೆಗಳನ್ನು ನಡೆಸಿಕೊಟ್ಟರು .

ಕಾರ್ಯಕ್ರಮದ ಆತಿಥೇಯ ರಾಗಿ  ಸಂಪತ್ ಕುಮಾರ್, ಶೀತಲ್ ಜೈನ್ ,ಧೀರೇಂದ್ರ ಬಲ್ಲಾಳ್ ಕುಟುಂಬದವರು ಸಹಕರಿಸಿದರು.

--------

ವರದಿ 

ಧೀರೇಂದ್ರ ಬಲ್ಲಾಳ್

Post a Comment

0 Comments