ಹೊಸಬೆಟ್ಟು ಸೇವಾ ಸಹಕಾರಿ ಸಂಘ (ನಿ)
ವಾರ್ಷಿಕ ಮಹಾಸಭೆ: ಶೇ ೧೭ ಡಿವಿಡೆಂಟ್ ಘೋಷಣೆ
ಹೊಸಬೆಟ್ಟು ಸೇವಾ ಸಹಕಾರಿ ಸಂಘದ ೨೦೨೩-೨೪ ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ ೨೧ ರಂದು ಅಧ್ಯಕ್ಷ ರಾಜೇಶ್ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ವಾರ್ಷಿಕ ವರದಿ ಹಾಗೂ ಆರ್ಥಿಕ ತಟ್ಟೆಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದೇಶ್ ರವರು ಮಂಡಿಸಿದರು. ಸಂಘವು ೨೦೨೩-೨೪ ನೇ ಸಾಲಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿAದ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ಪಡೆದಿದೆ.
ಪ್ರಸಕ್ತ ಸಾಲಿನಲ್ಲಿ ಸಂಘವು ೧೪.೬೩ ಕೋ ರೂ ವ್ಯವಹಾರ ನಡೆಸಿ ೫೩ ಲಕ್ಷ ರೂ ಪಾಲು ಬಂಡವಾಳ ೧೦.೧೯ ಕೋ.ರೂ ಠೇವಣಿ ಹೊಂದಿದ್ದು, ೯.೨೬ ಕೋ.ರೂ ಹೊರಬಾಕಿ ಸಾಲ ಇದ್ದು ಶೇಕಡಾ ೯೬% ಸಾಲ ವಸೂಲಾತಿ ಪ್ರಗತಿ ಸಾಧಿಸಿದೆ, ೧೩.೦೪ ಕೋ.ರೂ ದುಡಿಯುವ ಬಂಡವಾಳ ಹೊಂದಿದ್ದು, ೩೨.೧೩ ಲಕ್ಷ.ರೂ ಒಟ್ಟು ಲಾಭಗಳಿಸಿರುತ್ತದೆ. ಸಂಘವು ಸತತವಾಗಿ "ಎ" ವರ್ಗಿಕರಣ ಹೊಂದಿದ್ದು ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ.೧೭ ಡಿವಿಡೆಂಟ್ ನೀಡುವುದಾಗಿ ಘೋಷಿಸಲಾಯ್ತು. ಸಂಘದ ಅಭಿವೃದ್ಧಿಗೆ ಸಹಕರಿಸಿದ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು. ನಿರ್ದೇಶಕರುಗಳಾದ ಪದ್ಮಪ್ರಸಾದ್, ರೀಟಾ ಕುಟಿನ್ಹಾ, ವಲೇರಿಯನ್ ಕುಟಿನ್ಹಾ, ಸಚೀಂದ್ರ. ಶಿವರಾಮ ಪೂಜಾರಿ. ಸಂಜೀವ ನಾಯ್ ಲಿಯೋ ವಾಲ್ಟರ್ ನಜರತ್, ಸೆವುರಿನ್ ರೋಡ್ರಿಗಸ್, ಹೊನ್ನಯ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ ಸನಿಲ್ ಸ್ವಾಗತಿಸಿದರು, ನಿರ್ದೇಶಕರಾದ ಪೀಟರ್ ವಿಲ್ಲೇಡ್ ಮೆಂಡೋನ್ನ ವಂದಿಸಿದರು.
0 Comments