ಸಂಜೀವಿನಿ ಎಂಬಿಕೆ ಹಾಗು ಎಲ್ ಸಿ ಆರ್ ಪಿ ಸಂಘ ಅಸ್ತಿತ್ವಕ್ಕೆ
ಮೂಡುಬಿದಿರೆ ತಾಲೂಕು ಅಧ್ಯಕ್ಷರಾಗಿ ಗೀತಾ, ಕಾರ್ಯದರ್ಶಿ ಪ್ರತಿಭಾ
ಮೂಡುಬಿದಿರೆ ತಾಲೂಕಿನ ಗ್ರಾಮ ಪಂಚಾಯತ್ ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿ ( ಎಂಬಿಕೆ ಹಾಗು ಎಲ್ ಸಿ ಆರ್ ಪಿ) ಗಳ ಸಂಘಟನೆ ದರೆಗುಡ್ಡೆಯ ಸೋಮನಾಥೇಶ್ವರ ಸಂಜೀವಿನಿ ಒಕ್ಕೂಟದ ಕಚೇರಿಯಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಗೀತಾ ಆರ್. ಜೈನ್ ಕಾರ್ಯಡರ್ಶಿಯಾಗಿ ಪ್ರತಿಭಾ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಉಷಾ ಉಪಾಧ್ಯಕ್ಷರಾಗಿ ಮಾನಸ ಜೈನ್, ಜತೆ ಕಾರ್ಯದರ್ಶಿಯಾಗಿ ಲವೀನಾ, ಕೋಶಾಧಿಕಾರಿ ಪ್ರತಿಮಾ ಆಯ್ಕೆಗೊಂಡಿದ್ದಾರೆ. ಜಯಂತಿ, ನಾಗಶ್ರೀ,ಸುನೀತಾ ಗೌರವ ಸಲಹೆಗಾರರಾಗಿದ್ದಾರೆ. ಜಿಲ್ಲಾಧ್ಯಕ್ಷೆ ಜಯಂತಿ ಅವರು ಉಪಸ್ಥಿತ ರಿದ್ದು ಸೂಕ್ತ ಮಾರ್ಗದರ್ಶನ ನೀಡಿದರು. ಮೂಡುಬಿದಿರೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ನ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಗಳು ಉಪಸ್ಥಿತರಿದ್ದರು.
0 Comments