ಅಭಿನಂದನಾ ಸಮಾರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಅಭಿನಂದನಾ ಸಮಾರಂಭ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ , ಟೀಮ್‌ ಮೂಡಬಿದ್ರೆ ತಾಲೂಕು ಗ್ರಾಮ ಪಂಚಾಯತ್‌ ನೌಕರರ ಸಂಘ ಮೂಡಬಿದ್ರೆ ಇದರ ಸಭೆ ಹಾಗೂ ಪಂಚಾಯತ್‌ ನೌಕರರರಾಗಿ ಸೇವಾ ನಿವೃತ್ತಿ ಹೊಂದಿದ ಹರೀಶ ಶೆಟ್ಟಿ ಪಾಲಡ್ಕ ಪಂಚಾಯತ್‌ ರವರಿಗೆ ಮತ್ತು ಪಂಚಾಯತ್‌ ನೌಕರರಿಂದ ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿರುವ ಯಶೋಧರ ಶಿರ್ತಾಡಿ ಪಂಚಾಯತ್‌ ಇವರಿಗೆ ಅಭಿನಂದನಾ ಸಭೆಯನ್ನು ಮೂಡಬಿದ್ರೆ ಸಮಾಜ ಮಂದಿರ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಯಿತು ಸಮಾರಂಭದ ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ ಆಚಾರ್ಯ ರವರು ಈರ್ವರನ್ನು ಅಭಿನಂದಿಸಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತಾಡಿ ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟ ಕಡೆಯ ಗ್ರಾಮೀಣ ಪ್ರದೇಶದ ಕಡು ಬಡವರಿಗೆ ತಲುಪಿಸುವಲ್ಲಿ ಪಂಚಾಯತ್‌ ನೌಕರರ ವೃತ್ತಿಯ ಬಗ್ಗೆ ಕೊಂಡಾಡಿದರು ಅತ್ಯಲ್ಪ ವೇತನ ಪಡೆದು ಯಾವುದೇ ಭದ್ರತೆ ಇಲ್ಲದೇ ಸ್ವಚ್ಚ ಮನಸ್ಸಿನಿಂದ ದೇವರ ಕೆಲಸ ಎಂಬ ಮನೋಭಾವನೆಯಿಂದ ದುಡಿಯುವ ನೌಕರರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಸರಕಾರವು ನೌಕರರಿಗೆ ಭವಿಷ್ಯ ನಿಧಿ ಇ ಎಸ್‌ ಐ ಮುಂತಾದ ಭದ್ರತಾ ಯೋಜನೆಗಳನ್ನು ನೀಡಬೇಕು ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಹೆಚ್ಚಿನ ಜವಾಬ್ದಾರಿಯುತ ಕೆಲಸ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಒಂದು ಒಳ್ಳೆಯ ವೇತನ ಶ್ರೇಣಿ ನಿಗದಿಪಡಿಸಿ ನೀಡಬೇಕು  ಇದರಿಂದ ಕುಟುಂಬ ನಿರ್ವಹಣೆಗೆ  ಸಾಧ್ಯ ಎಂದು ಹೇಳುತ್ತಾ ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗ ದ ಎಲ್ಲಾ ವಿಧಗಳ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ ಅರಿತ ಪಂಚಾಯತ್‌ ನೌಕರರ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ಮಾಧ್ಯಮದ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು ಎಂದು ವೇದಿಕೆಯಿಂದ ಭರವಸೆಯ ನುಡಿಗಳನ್ನು ಆಡಿ ಕಡಿಮೆ ವೇತನ ಪಡೆದರೂ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅಭಿನಂದಿತರ ಜತೆಗೆ ನನ್ನನ್ನು ಗೌರವಿಸಿದ ಎಲ್ಲ ರಿಗೂ ವಂದಿಸಿದರು.  ಸಮಾರಂಭದ ನೌಕರರು ಎದುರಿಸುತ್ತಿರುವ ಬವಣೆಗಳ ಕುರಿತಾಗಿ ಪ್ರಾಸ್ತಾವಿಕ ನುಡಿಯಾಗಿ ಸಂಜೀವ ನಾಯ್ಕ ಪುತ್ತಿಗೆ ಗ್ರಾಮ ಪಂಚಾಯತ್‌  ಮತ್ತು ಗಣೇಶ್‌ ಹೊಸಬೆಟ್ಟು ಗ್ರಾಮ ಪಂಚಾಯತ್‌ ರವರು ಮಾತಾಡಿದರು ಸನ್ಮಾನ ಸ್ವೀಕರಿಸಿದ ಹರೀಶ ಶೆಟ್ಟಿ ಪಾಲಡ್ಕ ಪಂಚಾಯತ್‌ ಮತ್ತು ಪದೋನ್ನತಿ ಹೊಂದಿದ ಯಶೋಧರ ಶಿರ್ತಾಡಿ ಗ್ರಾಮ ಪಂಚಾಯತ್‌ ರವರು ತಮ್ಮ ಅನಿಸಿಕೆ ತಿಳಿಸಿದರು ಸನ್ಮಾನ ಪತ್ರವನ್ನು ರಕ್ಷಿತಾ ಬೆಳುವಾಯಿ  ಪಂಚಾಯತ್‌  ಮತ್ತು ರಾಜು ಪಡುಮಾರ್ನಾಡ್‌ ಪಂಚಾಯತ್‌ ರವರು ವಾಚಿಸಿದರು ಸಭಾ ವೇದಿಕೆಯಲ್ಲಿ ನೌಕರರ ಸಂಘದ ಉಪಾಧ್ಯಕ್ಷರಾದ ಗಿರಿಜಾ ಉಪಸ್ಥಿತರಿದ್ದರು ಸಭೆಯ ಅಧ್ಯಕ್ಷತೆಯನ್ನು ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ನಯನ ರವರು ವಹಿಸಿ ಸರಕಾರದ ಗಮನ ಸೆಳೆಯಲು ಪಂಚಾಯತ್‌ ನೌಕರರು ಒಗ್ಗಟಾಗಿ ಮನವಿ ನೀಡಬೇಕು ಮತ್ತು ಸರ್ವರ ಸಹಕಾರ ಯಾಚಿಸಿದರು ನಾಡಗೀತೆಯೊಂದಿಗೆ ಸಭೆಯನ್ನು ಪ್ರಾರಂಭಸಿ ರಾಕೇಶ್‌ ತೆಂಕ ಮಿಜಾರು ಸ್ವಾಗತಿಸಿ ಕಿಶೋರ್‌ ಪಡುಮಾರ್ನಾಡ್‌ ಪಂಚಾಯತ್‌ ಇವರು  ವಂದಿಸಿದರು ಪ್ರಶಾಂತ್‌ ಕುಮಾರ್‌ ಜೈನ್‌ ನೆಲ್ಲಿಕಾರು ಪಂಚಾಯತ್‌ ರವರು ನಿರೂಪಿಸಿದರು ಮೂಡಬಿದ್ರೆ ತಾಲೂಕು ವ್ಯಾಪ್ತಿಯ 12 ಪಂಚಾಯತ್‌ ಗಳ ನೌಕರರು ಉಪಸ್ಥಿತಿ ಇದ್ದರು

Post a Comment

0 Comments