ಮೂಡುಬಿದಿರೆ: ನಮನ ಯುವ ಬಾಂಧವರು ಹೆನ್ ಬೆಟ್ಟು ಬೆಳುವಾಯಿ ಇವರ ಪ್ರಾಯೋಜಕತ್ವದಲ್ಲಿ ಭಾನುವಾರ ಒಂಟಿಕಟ್ಟೆಯ "ಕೋಟಿ-ಚೆನ್ನಯ" ಜೋಡುಕರೆಯಲ್ಲಿ ನಡೆದ ನೇಗಿಲು ಸಬ್ ಜೂನಿಯರ್ ವಿಭಾಗದ ಸ್ನೇಹಕೂಟ ಕಂಬಳದ ಫಲಿತಾಂಶ
ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ ಮೂಡಾರು ಹಚ್ಚೊಟ್ಟು ಪ್ಲೋರಾ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು
ಕಕ್ಯಪದವು ಮಹಾಮ್ಮಾಯಿ ಗೌತಮ್ ಗೌಡ ಕೋಣಗಳನ್ನು ಓಡಿಸಿದವರು.
ದ್ವಿತೀಯ: ಪಡು ಸಾಂತೂರು ಕಲ್ಯಾಣಿ ನಿವಾಸ ರಾಮ ದೇಜು ಪೂಜಾರಿ
ಓಡಿಸಿದವರು: ಭಟ್ಕಳ ಶಂಕರ್
ತೃತೀಯ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ
ಓಡಿಸಿದವರು: ಬೈಂದೂರು ಮಂಜುನಾಥ್ ಗೌಡ
ಚತುರ್ಥ: ಕಕ್ಯಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು: ಕಕ್ಯಪದವು ಪೆಂರ್ಗಾಲು ಕೃತಿಕ್ ಗೌಡ
ಒಟ್ಟು 132 ಜೊತೆ ಕೋಣಗಳು ಈ ಸ್ನೇಹಕೂಟದಲ್ಲಿ ಭಾಗವಹಿಸಿದ್ದವು.
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಕೋಣಗಳ ಯಜಮಾನರುಗಳಿಗೆ ಚಿನ್ನದ ಪದಕ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು.
ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಮೂಡುಬಿದಿರೆ ಕಂಬಳ ಸಮಿತಿಯ ನಾಗರಾಜ, ಕಂಬಳ ಕೋಣಗಳ ಯಜಮಾನರುಗಳಾದ ಹರ್ಷವರ್ಧನ್ ಪಡಿವಾಳ್, ಪಂಚಶಕ್ತಿ ರಂಜಿತ್ ಪೂಜಾರಿ ತೋಡಾರು, ಪ್ರವೀಶ್, ನಮನ ಯುವ ಬಾಂಧವೆರ್ ಇದರ ಹರ್ಮನ್, ರಘು ಪೆಲಕುಂಜ, ಸದಾನಂದ ಶೆಟ್ಟಿ ಹೆನ್ ಬೆಟ್ಟು,ಸಂತೋಷ್ ಹೆನ್ ಬೆಟ್ಟು, ಪುರುಷೋತ್ತಮ ಆಲಂಗಾರು, ನವೀನ್ ಅಂಬೂರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
.
0 Comments