ಮೂಡುಬಿದಿರೆ ತಾಲೂಕಿನಲ್ಲಿ ತೆನೆ ಹಬ್ಬದ ಸಂಭ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ತಾಲೂಕಿನಲ್ಲಿ ತೆನೆ ಹಬ್ಬದ ಸಂಭ್ರಮ  

ಮೂಡುಬಿದಿರೆ : ಮೋಂತಿ ಫೆಸ್ತ್ ಅಂಗವಾಗಿ 9 ದಿನಗಳ ನೊವೇನಾದ ಅಂತಿಮ ದಿನವಾದ ಭಾನುವಾರದಂದು  ತಾಲೂಕಿನ ಚಚ್ ೯ಗಳಲ್ಲಿ ಕ್ರೈಸ್ತ ಧರ್ಮದ ಬಂಧುಗಳು ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.


  ವಲಯದ ಪ್ರಧಾನ ಚಚ್೯ ಆಗಿರುವ ಕೋರ್ಪಸ್ ಚಚ್ ೯ ವತಿಯಿಂದ ಮೂಡುಬಿದಿರೆ ಪೇಟೆಯ ನಿಶ್ಮಿತಾ ಸರ್ಕಲ್ ಎದುರು ತೆನೆಗಳ ಆಶೀರ್ವಚನ ನಡೆದ ನಂತರ ತೆನೆಗಳನ್ನು ಹಿಡಿದುಕೊಂಡು ಭಕ್ತಾಧಿಗಳು ಚಚ್ ೯ ವರೆಗೆ ಮೆರವಣಿಗೆಯಲ್ಲಿ ಸಾಗಿದರು.

  ಚಚ್ ೯ನ ಧರ್ಮಗುರು ಓನಿಲ್ ಡಿ'ಸೋಜಾ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.


ಹೊಸಬೆಟ್ಟು ಹೋಲಿ ಕ್ರಾಸ್ ಚಚ್ ೯ನಲ್ಲಿ ಸಂಭ್ರಮದಿಂದ ಮೋಂತಿ ಫೆಸ್ತನ್ ಆಚರಿಸಲಾಯಿತು.   ಧರ್ಮಗುರು ಗ್ರೆಗರಿ ಡಿ'ಸೋಜಾ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು. 


  ಅಲಂಗಾರು ಹೋಲಿ ರೋಸರಿ ಇಗರ್ಜಿಯಲ್ಲಿ ವಂದನೀಯ ಧರ್ಮಗುರು ರೇ. ಪಾ ಮೇಲ್ವಿನ್ ನೋರೋನ್ಹ ಅವರ ನೇತೃತ್ವದಲ್ಲಿ ಶ್ರದ್ದಾಪೂರ್ವಕವಾಗಿ ತೆನೆ ಹಬ್ಬವನ್ನು  ಆಚರಿಸಲಾಯಿತು.

ಹೋಲಿ ಸ್ಪಿರೀಟ್ ಚಚ್ ೯ ಸಂಪಿಗೆ ಇಲ್ಲಿ ತೆನೆ ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

 ಧರ್ಮಗುರು ವಿನ್ಸೆಂಟ್ ಡಿ'ಸೋಜಾ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.

ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ ಇಲ್ಲಿ ಧರ್ಮಗುರು ರೊನಾಲ್ಡ್ ಪ್ರಕಾಶ್ ಡಿ'ಸೋಜಾ ಅವರ ನೇತೃತ್ವದಲ್ಲಿ ಮೋಂತಿ ಫೆಸ್ತ್ ನ್ನು ಸಂಭ್ರಮದಿಂದ ಆಚರಿಸಲಾಯಿತು.

Post a Comment

0 Comments