ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಬೆಂಬಲ : ಅಭಯಚಂದ್ರ
ಮೂಡುಬಿದಿರೆ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜ್ಯದಲ್ಲಿ ಅಧಿಕಾರ ನಡೆಸಲು ಯಾವುದೇ ಗೊಂದಲ ಉಂಟಾಗದು. ಅವರಿಗೆ ಕಾಂಗ್ರೆಸ್ ಸಂಪೂರ್ಣವಾಗಿ ನೈತಿಕ ಬೆಂಬಲ ನೀಡಲಿರುವುದಾಗಿ ರಾಜ್ಯದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಹೈಕೋರ್ಟ್ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಮುಂದೆ ಸುಪ್ರೀ ಕೋಟ್ ೯ಗೆ ಅಫೀಲು ಸಲ್ಲಿಸಲು ಅವಕಾಶವಿದ್ದು ಕಾನೂನು ಕ್ರಮದ ಬಗ್ಗೆ ಅವರು ಹೆಜ್ಜೆ ಇಡಲಿದ್ದಾರೆ. ಅದರಿಂದ ರಾಜ್ಯ ಸರಕಾರದ ಸ್ಥಿರತೆಗೆ ಧಕ್ಕೆಯಾಗದು. ಬಿಜೆಪಿಗರು ಈ ಬಗ್ಗೆ ಖುಷಿ ಪಡುವಂತದ್ದು ಏನೂ ಇಲ್ಲ ಎಂದವರು ಹೇಳಿದರು.
ಭ್ರಷ್ಟ ಬಿಜೆಪಿಯು ಸರ್ಕಾರ ನಡೆಸಿದಾಗಲೆಲ್ಲಾ ಭ್ರಷ್ಟಾಚಾರ ತಾಂಡವವಾಡಿತ್ತು. ಹಾಗಾಗಿ ಬಿಜೆಪಿ ಸರ್ಕಾರವನ್ನು ಜನತೆಯೂ ಬಯಸರು ಎಂದು ಅಭಯಚಂದ್ರ ಹೇಳಿದರು.
0 Comments