ಮೂಡುಬಿದಿರೆ ಎಕ್ಸಲೆಂಟ್‌ನ ಯುವರಾಜ್‌ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾಸೇವಾರತ್ನ ಪುರಸ್ಕಾರ
ಮೂಡುಬಿದಿರೆ: ವಿಶ್ವಶಾಂತಿ ಯುವಸೇವಾ ಸಮಿತಿ(ರಿ) ಬೆಂಗಳೂರು ಆಯೋಜನೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಆದಿನಾಥ ವೈಭವಜಿನ ಸಹಸ್ರನಾಮ ಸ್ತುತಿಗಾಯನ ವಿಶ್ವದಾಖಲೆ ಕಾರ್‍ಯಕ್ರಮದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಯುವರಾಜ್‌ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾ ಸೇವಾರತ್ನ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಕ್ರಾಂತಿಕಾರಕ ಸಾಧನೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸೇವಾ ತತ್ವರತೆ ,ಜೈನಧರ್ಮದ ಸಂಘಟನೆಯಲ್ಲಿನ ಬದ್ಧತೆ, ನಾಡುನುಡಿಗೆ ಅನನ್ಯ ಕೊಡುಗೆಯನ್ನು ಗುರುತಿಸಿ ಈ ಪುರಸ್ಕಾರ ಮಾಡಲಾಯಿತು.
ವೇದಿಕೆಯಲ್ಲಿ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಭಾರತಭೂಷಣ ಜಗದ್ಗುರು ಸ್ವಸ್ತಿ ಶ್ರೀ ಭಟ್ಟಾರಕ ಡಾ.ಚಾರುಕೀರ್ತಿ ಪಂಡಿತಾಚಾರ್‍ಯವರ್‍ಯ ಮಹಾಸ್ವಾಮೀಜಿ, ಡಿ ಹರ್ಷೆಂದ್ರ ಹೆಗ್ಡೆ, ಮಾಜಿಸಚಿವರಾದ ಅಭಯಚಂದ್ರ ಜೈನ್, ಎಕ್ಸಲೆಂಟ್ ಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಧವಳಾ ಕಾಲೇಜು ಉಪನ್ಯಾಸಕರಾದ ಅಜಿತ್‌ಪ್ರಸಾದ್ , ಶ್ರೀಮತಿ ವೀಣಾ ಬಿ.ಆರ್ ಶೆಟ್ಟಿ, ವಿಶ್ವಶಾಂತಿ ಯುವ ಸೇನಾ ಸಮಿತಿಯ ನವೀನ್ ಪ್ರಸಾದ್ ಜಾಂಬಳೆ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಮಿತಿಯ ಧೀರಜ್ ಹೊಳೆನರಸೀಪುರ ಕಾರ್‍ಯಕ್ರಮ ನಿರ್ವಹಿಸಿದರು.
0 Comments