ಜೇಸಿ ಸಪ್ತಾಹ -2024
ಸುನಿಲ್ ಕುಮಾರ್ ಗೆ 'ಕಮಲಪತ್ರ", ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಜೆಸಿಐ ಮೂಡಬಿದ್ರಿ ತ್ರಿಭುವನ್ ವತಿಯಿಂದ ಜೆಸಿ ಸಪ್ತಾಹ 2024 ಅಂಗವಾಗಿ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಜೆಸಿಐ ಮೂಡುಬಿದಿರೆ ತ್ರಿಭುವನ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ ಐ ಘಟಕದ ಕಮಲ ಪತ್ರವನ್ನು ಸುನಿಲ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಮುಖ್ಯಮಂತ್ರಿಗಳ ಪದಕಕ್ಕೆ ಪಾತ್ರರಾಗಿರುವ ಮೂಡುಬಿದಿರೆ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಹವ್ಯಾಸಿ ಕಲಾವಿದ ದಾಮೋದರ ಸಫಳಿಗ, ಅಂಚೆ ಇಲಾಖೆಯ ಅರುಣಾಕ್ಷಿ, ಸಮುದಾಯ ಅರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ ಬಿ. ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಿಗೆ ಮತ್ತು ಜೆಸಿಐನಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಜೆಸಿಐ ನ ಪೂರ್ವ ಅಧ್ಯಕ್ಷರಾದ ಅನಂತವೀರು ಜೈನ್, ಸಂತೋಷ್ ಕುಮಾರ್, ಸೀನಿಯರ್ ಚೇಂಬರಿನ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಜೆಸಿ ರೆಟ್ ಅಧ್ಯಕ್ಷೆ ಅಕ್ಷತಾ ಪ್ರದೀಪ್, ಜೆಜೆಸಿ ಅಧ್ಯಕ್ಷ ಶೈಲೇಶ್, ಜೆಸಿ ವೀಕ್ ಸಂಯೋಜಕಿ ವರ್ಷಕಾಮತ್ ಉಪಸ್ಥಿತರಿದ್ದರು.
ಜೆಸಿ ಉಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
0 Comments