ಪ್ರಕಾಶ್ ಜೆ.ಶೆಟ್ಟಿಗಾರ್ ಗೆ 'ಪದ್ಮ ಪ್ರತಿಭಾ-2024' ಪುರಸ್ಕಾರ
ಮೂಡುಬಿದಿರೆ: ಇಲ್ಲಿನ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರು 'ಪದ್ಮ ಪ್ರತಿಭಾ-2024' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಸೆ.15 ರಂದು ಮುಲುಂಡ್ ಪಶ್ಚಿಮದ ಮಹಾರಾಷ್ಟ್ರ ಸೇವಾ ಸಂಘದ ಸಭಾಗೃಹದಲ್ಲಿ ನಡೆಯಲಿರುವ ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ 88ನೇ ವಾರ್ಷಿಕ ಮಹಾಸಭೆ,ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿಯ 49ನೇ ವಾರ್ಷಿಕ ಮಹಾಸಭೆಯಲ್ಲಿ ಪುರಸ್ಕಾರ ಪಡೆದುಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡಿಗ ಕಲಾವಿದರ ಪರಿಷತ್ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಅವರಿಗೆ ಪದ್ಮಕಲಾ ತಪಸ್ವಿ ಪುರಸ್ಕಾರವನ್ನು ಪಡೆದುಕೊಳ್ಳಲಿದ್ದಾರೆ.
0 Comments