ಮಳೆ ಹಾನಿ : ದರೆಗುಡ್ಡೆಯಲ್ಲಿ ಗದ್ದೆಗೆ ತುಂಬಿದ ಮಣ್ಣು, ರಸ್ತೆ ಕುಸಿತ, ಉರುಳಿದ ವಿದ್ಯುತ್ ಕಂಬ

ಜಾಹೀರಾತು/Advertisment
ಜಾಹೀರಾತು/Advertisment

 ಮಳೆ ಹಾನಿ : ದರೆಗುಡ್ಡೆಯಲ್ಲಿ ಗದ್ದೆಗೆ ತುಂಬಿದ ಮಣ್ಣು, ರಸ್ತೆ ಕುಸಿತ, ಉರುಳಿದ ವಿದ್ಯುತ್ ಕಂಬ

ಮೂಡುಬಿದಿರೆ:ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬುಧವಾರ ಸುರಿದ ಮಳೆಗೆ ಹಾನಿಯಾಗಿದ್ದು ಸೇತುವೆ, ರಸ್ತೆ ಕುಸಿತ, 10 ಎಕ್ರೆಯಷ್ಟು ಗದ್ದೆಗೆ ಮಣ್ಣು ಸೇರಿಕೊಂಡು ಅಪಾರ ನಷ್ಟ ಉಂಟಾಗಿದೆಯಲ್ಲದೆ ವಿದ್ಯುತ್ ಕಂಬವೊಂದು ಧರೆಗುರುಳಿದೆ.

  ಪಾಡ್ಯಾರು ಬೈಲು ಎಂಬಲ್ಲಿ ಮರ್ದ ಶೆಟ್ಟಿ, ಶ್ರೀಧರ್ ಶೆಟ್ಟಿ  10 ಎಕ್ರೆ ಬತ್ತದ ಗದ್ದೆಗೆ ಹೂಳು ತುಂಬಿಕೊಂಡುದರೆಗುಡ್ಡೆ ವಿಠಲ ದೇವಸ್ಥಾನದ  ಬಳಿ ಬರೆ ಜರಿದಿದೆ. ಶೀನ ಶೆಟ್ರ ಗದ್ದೆಯ ಬಳಿ ಚರಂಡಿ ಬ್ಲಾಕ್ ಆಗಿ ಗದ್ದೆಗೆ ನೀರು ತುಂಬಿಕೊಂಡಿದೆ. 


ಪಣಪಿಲ ನಿವಾಸಿ ರತ್ನ ಪೂಜಾರ್ತಿ ಅವರ ದರೆಗುಡ್ಡೆಯ ನೆಲ್ಲಿಂಜ ಎಂಬಲ್ಲಿರುವ ಒಂದೂವರೆ ಎಕ್ರೆ ಪ್ರದೇಶದಲ್ಲಿರುವ ತೋಟಕ್ಕೆ ಎರಡ್ಮೂರು ಕಡೆಯಿಂದ ಹರಿಯುವ ನೀರು ಬಂದು ಸೇರಿದ್ದು ನಷ್ಟ ಉಂಟಾಗಿದೆ ಅಲ್ಲದೆ ಪಕ್ಕದಲ್ಲಿರುವ ನಿರ್ಮಲ್ ಜೈನ್ ಮತ್ತು ಮಹಾವೀರ ಜೈನ್ ಅವರ ಗದ್ದೆಗಳಿಗೆ ನೀರು ತುಂಬಿ ನಷ್ಟ ಉಮಟಾಗಿದೆ.


ದರೆಗುಡ್ಡೆಯ ಬಿರ್ಮೆರೆ ಬೈಲು ಎಂಬಲ್ಲಿ ಸೇತುವೆ ನೀರು ಪಾಲಾಗಿದ್ದು, ಅರ್ಬಿ ಸೇತುವೆ ಕೂಡಾ ನೀರು ಪಾಲಾಗುವ ಸ್ಥಿತಿಯಲ್ಲಿದೆ.


  ಕೆಲ್ಲಪುತ್ತಿಗೆ ಗ್ರಾಮದ ದಡ್ಡೇಲು ಸಂಕ ಎಂಬಲ್ಲಿ ರಸ್ತೆ ಬದಿ ಕುಸಿದು ಗದ್ದೆಗೆ ತೊಂದರೆಯುಂಟಾಗಿದೆ. ಹಾಗೂ ಬೋಜ ಮೂಲ್ಯ ಅವರ ಆವರಣ ಗೋಡೆ ಕುಸಿದಿದೆ. ಉರಿಯಾಳ ಎಂಬಲ್ಲಿ   ಪ್ರವಾಹದಿಂದಾಗಿ ಗದ್ದೆಗಳು ಕೊಚ್ಚಿ ಹೋಗಿವೆ. ದೇಮಂಗಡಿಯ ಸಾಧು ಶೆಟ್ಟಿ ಅವರ ಮನೆ, ಕೊಟ್ಟಿಗೆಯೊಳಗಡೆ ನೀರು ತುಂಬಿಕೊಂಡಿದ್ದು ವಿದ್ಯುತ್ ಉಪಕರಗಳು ಹಾನಿಗೀಡಾಗಿವೆ.  ಅವರ ದನಗಳನ್ನು ರಾತ್ರಿ ಗುಡ್ಡ ಪ್ರದೇಶದಲ್ಲಿ ಕಟ್ಟಿ ಹಾಕಲಾಗಿತ್ತು.


   ಹಾನಿಗೊಳಗಾಗಿರುವ ಕೆಲವು ಪ್ರದೇಶಗಳಿಗೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಲೊಕೇಶ್ ಬಿ., ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಉಪಾಧ್ಯಕ್ಷರು, ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ,  ಗ್ರಾಮಕರಣಿಕರು ಭೇಟಿ ನೀಡಿ ಪರುಶೀಲನೆ ನಡೆಸಿದರು.

Post a Comment

0 Comments