ಆಟೋ ಮಾಲಕ-ಚಾಲಕರ ಸಂಘದಿಂದ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ.ಗೆ ಸನ್ಮಾನ
ಮೂಡುಬಿದಿರೆ: 78ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಮೂಡುಬಿದಿರೆಯ ಆಟೊ ರಿಕ್ಷಾ ಮಾಲಕ-ಚಾಲಕರ ಸಂಘದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಅವರನ್ನು ಸನ್ಮಾನಿಸಲಾಯಿತು.
ಆಶ್ರಯ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ಬಶೀರ್ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸ ಲಾಯಿತು.
ಸಂಘದ ಗೌರವಾಧ್ಯಕ್ಷ ಶರತ್ ಡಿ.ಶೆಟ್ಟಿ, ಅಧ್ಯಕ್ಷ ಧರಣೇಂದ್ರ ಜೈನ್ ಕರಿಂಜೆ, ಕಾರ್ಯದರ್ಶಿ ದೀಪಕ್ ರಾಜ್ ಕೊಡಂಗಲ್ಲು, ಸ್ಥಳೀಯರಾದ ಹೈದರಾಲಿ, ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು.
0 Comments