ಅಶ್ವತ್ಥಪುರ: ಶ್ರೀ ಕೃಷ್ಣ ಲೀಲೆ ಸ್ಪರ್ಧೆ
ಮೂಡುಬಿದಿರೆ: ವಿದ್ಯಾಭಿಮಾನಿ ಸಂಸ್ಥೆ ಹಾಗು ಡ್ಯಾನ್ಸ್ ಕ್ಲಾಸ್ ಅಶ್ವತ್ಥಪುರ ಮತ್ತು ಕಲಾನಿಧಿ ಸಹಕಾರ ಸಂಘ ನಿಯಮಿತ ಇವುಗಳ ಸಹಯೋಗದಲ್ಲಿ ಶ್ರೀ ಕೃಷ್ಣ ಲೀಲೆ ಸ್ಪರ್ಧೆ ನಡೆಯಿತು.
ಶ್ರೀ ಸೀತಾರಾಮಚಂದ್ರ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಘುನಾಥ್ ಭಟ್ ವಂಟಿಮಾರ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಮಚಂದ್ರ ಮಿಜಾರು ಈ ನೆಲದ ಸಂಸ್ಕೃತಿಯನ್ನು ಉಳಿಸುವ ಹಾಗು ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲೂ ಉತ್ತಮ ಅಂಕಗಳಿಸಿ ಮಾನವೀಯ ಮೌಲ್ಯಗಳನ್ನು ಹೊಂದಬೇಕೆಂದರು.
ವೇದಿಕೆಯಲ್ಲಿ ವಿದ್ಯಾಭಿಮಾನಿ ಸಂಸ್ಥೆ ಮತ್ತು ಡ್ಯಾನ್ಸ್ ಕ್ಲಾಸ್ ಇದರ ಅಧ್ಯಕ್ಷರಾದ ಕೃಷ್ಣ ಭ್ರಾಮರಿ ನಿಲಯ ಅಶ್ವತ್ಥಪುರ ಇವರು ಅಧ್ಯಕ್ಷತೆ ವಹಿಸಿದ್ದರು.
ಇನ್ನೋರ್ವ ಅತಿಥಿ ತಾ.ಪಂ.ಪ್ರಭಾರ ಸಹಾಯಕ ನಿರ್ದೇಶಕ ಸಾಯೀಶ್ ಚೌಟ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಒಗ್ಗಟ್ಟಿಗೆ ಇಂತಹ ಕಾರ್ಯಕ್ರಮಗಳು ಇಂದಿನ ಅನಿವಾರ್ಯತೆಗಳು ಎಂದು ತಿಳಿಸಿದರು.
ವೇದಿಕೆಯಲ್ಲಿ ಅಶ್ವತ್ಥಪುರ ಶ್ರೀ ಗಣೇಶೋತ್ಸವ ಸಮತಿ ಅಧ್ಯಕ್ಷ ಅಶ್ವತ್ಥಾಮ,ಉಮೇಶ್ ಶೆಟ್ಟಿ ಮರಕಡ,ತೀರ್ಪುಗಾರರಾದ ಡಾ.ಅನೀಶ್ ಕುಮಾರ್,ಸ್ವಪ್ನ ಚೈತನ್ಯ, ಕವಿತಾ ಟಿ.ಆರ್,ಸೌಮ್ಯ ತಿಲಕ್ ಶೆಟ್ಟಿ, ವಿರಾಜ್ ಚೌಟ, ಕಾರ್ಯ ಸಮಿತಿ ಮುಖ್ಯಸ್ಥರಾದ ತೇಜಸ್ವಿ, ಗಣೇಶ,ಡ್ಯಾನ್ಸ್ ಮಾಸ್ಟರ್ ವಿನೇಶ್ ಗಂಜಿಮಠ ಉಪಸ್ಥಿತರಿದ್ದರು.
ಶ್ರೀಧರ್ ಕೊಂಪದವು ನಿರ್ವಹಿಸಿದರು.
ಸ್ಪರ್ಧೆಯಲ್ಲಿ ಸುಮಾರು 135 ಸ್ಪರ್ಧಾಳುಗಳು ಭಾಗವಹಿಸಿದ್ದು ಮುದ್ದು ಕೃಷ್ಣ, ಯಶೋಧ ಕೃಷ್ಣ, ತುಂಟ ಕೃಷ್ಣ ಮತ್ತು ಕೃಷ್ಣ ಲೀಲೆ ಸ್ಪರ್ಧೆಗಳು ನಡೆದವು.
0 Comments