ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಗೆ ಶಿರ್ತಾಡಿ ಮಕ್ಕಿ ಶಾಲೆಯ ಭೀಮೇಶ್ ಆಯ್ಕೆ
ಮೂಡುಬಿದಿರೆಯ ಜವಹರಲಾಲ್ ನೆಹರು ಪ್ರೌಢಶಾಲೆ ಶಿರ್ತಾಡಿ ವಿದ್ಯಾನಗರ ಮಕ್ಕಿ ಇಲ್ಲಿಯ ಎಂಟನೇ ತರಗತಿ ವಿದ್ಯಾರ್ಥಿ ಭೀಮೇಶ್ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ಭೀಮೇಶ್ ಮೂಲತಃ ಯಾದಗಿರಿ ಜಿಲ್ಲೆಯವರಾಗಿದ್ದಾರೆ. ಭೀಮೇಶ್ ಶ್ರೀ ಡಿ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ದರಗುಡ್ಡೆ(BCWD 444) ಇಲ್ಲಿಗೆ ಆಯ್ಕೆಯಾದ ವಿದ್ಯಾರ್ಥಿಯಾಗಿರುತ್ತಾನೆ.
ವಿದ್ಯಾರ್ಥಿ ಭೀಮೇಶ್ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.
0 Comments