ಜವನೆರ್ ಬೆದ್ರದಿಂದ ಅಷ್ಟಮಿದ ಗೊಬ್ಬು

ಜಾಹೀರಾತು/Advertisment
ಜಾಹೀರಾತು/Advertisment

 ಜವನೆರ್ ಬೆದ್ರದಿಂದ ಅಷ್ಟಮಿದ  ಗೊಬ್ಬು

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು, ಮಹಿಳೆಯರು ಹಾಗೂ ಪುರುಷರು

 ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೮ನೇ ವರ್ಷದ ಮೊಸರುಕುಡಿಕೆ ಉತ್ಸವದಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಭಾನುವಾರ ಸ್ವರಾಜ್ಯ ಮೈದಾನದಲ್ಲಿ ಸಾಂಪ್ರದಾಯಿಕ ಕ್ರೀಡೆಗಳೊಂದಿಗೆ ಅಷ್ಟಮಿದ ಗೊಬ್ಬು ನಡೆಯಿತು.

  ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಪೂರ್ಣಚಂದ್ರ ಜೈನ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜವನೆರ್ ಬೆದ್ರ ಸಂಘಟನೆಯು ಸಾಮಾಜಿಕ ಕಳಕಳಿಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಇದೀಗ ಮೊಸರು ಕುಡಿಕೆ ಉತ್ಸವದಂಗವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದೆ ಎಂದರು. 



  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪೆಟ್ನೋಲ್ ಬಿಡುವ ಬಿಡುವ ಮೂಲಕ ಅಷ್ಟಮಿದ ಗೊಬ್ಬಿಗೆ ಚಾಲನೆ ನೀಡಿ ಮಾತನಾಡಿ ಸಮಾಜಮುಖಿ ಕೆಲಸಗಳಾದ ರಕ್ತದಾನ, ಪರಿಸರ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದು ಇಂತಹ ಕೆಲಸಗಳನ್ನು ಇನ್ನಷ್ಟು ಮಾಡುವಂತ್ತಾಗಲಿ ಎಂದರು.

 

 ವಿದ್ಯಾಗಿರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಂಗಾಧರ ಶೆಟ್ಟಿ, ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು ಒಂಟಿಕಟ್ಟೆ, ಉದ್ಯಮಿ ರಾಮನಾಥ ಪ್ರಭು, ನಿವೃತ್ತ ದಫೇದಾರ್ ರಾಜೇಂದ್ರಜೀ, ಪತ್ರಕರ್ತ ಹರೀಶ್ ಕೆ.ಅದೂರು ಅತಿಥಿಗಳಾಗಿ ಭಾಗವಹಿಸಿದ್ದರು.


ಜವನೆರ್ ಬೆದ್ರ ಸಂಘಟನೆಯ ಕಾರ್ಯದರ್ಶಿ ಗಣೇಶ್ ಪೈ, ಯುವಘಟಕದ ಅಧಕ್ಷ ನಾರಾಯಣ ಪಡುಮಲೆ, ಮನು ಒಂಟಿಕಟ್ಟೆ, ರಂಜಿತ್  ಮತ್ತಿತರರು ಈ ಸಂದರ್ಭದಲ್ಲಿದ್ದರು.

ಸಂದೀಪ್ ಕೆಲ್ಲಪುತ್ತಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ವಂದಿಸಿದರು.

  ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

Post a Comment

0 Comments