ಪವರ್ ಫ್ರೆಂಡ್ಸ್ ಬೆದ್ರದ "ಪಿಲಿನಲಿಕೆ" ಅಮಂತ್ರಣ ಪತ್ರಿಕೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಪವರ್ ಫ್ರೆಂಡ್ಸ್  ಬೆದ್ರದ "ಪಿಲಿನಲಿಕೆ" ಅಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಾ ಬರುತ್ತಿರುವ ಪವರ್  ಫ್ರೆಂಡ್ಸ್ ಬೆದ್ರ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆಸುವ "ಪಿಲಿ ನಲಿಕೆ" ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮತ್ತು ಕುಟುಂಬ ಸಮ್ಮಿಲನ ಎಂಬುವ ವಿಶೇಷ ಕಾರ್ಯಕ್ರಮವು ಪ್ರೀತಮ್ ಗಾರ್ಡನ್ ಹಾಲ್ ನಲ್ಲಿ ನಡೆಯಿತು.


  ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳು ಇನ್ನೂ ಜೀವಾಂತವಾಗಿರುವುದು ಅದು ನಮ್ಮ ಕುಟುಂಬ ವ್ಯವಸ್ಥೆಯಿಂದ. ಅದನ್ನು ನೆನಪಿಸುವಂತಹ ಕೆಲಸಗಳನ್ನು ಮಾತ್ರ ಪವರ್ ಫ್ರೆಂಡ್ ಸಂಘಟನೆ ಮಾಡುತ್ತಿಲ್ಲ ಬದಲಾಗಿ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಮೂಡುಬಿದಿರೆ ಜನತೆಯ ಹೃದಯವನ್ನು ತಟ್ಟಿದೆ  ಎಂದರು. 


ಆಳ್ವಾಸ್ ನ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಾವು ಕ್ರೋಢೀಕರಿಸುವ ಸಂಪನ್ಮೂಲ ಮತ್ತು  ಮಾಡುವ ಕೆಲಸಗಳಿಂದ ಸಮಾಜಕ್ಕೆ, ಮಕ್ಕಳಿಗೆ ಮತ್ತು ಸಂಘಟನೆಗೆ ಏನು ಪ್ರಯೋಜನವಿದೆ ಎಂಬುದನ್ನು ಅರಿತು ಕೆಲಸಗಳನ್ನು ಮಾಡಬೇಕೆಂದ ಅವರು ಒಂದೂವರೆ ಸಾವಿರ ಯುವಕರನ್ನು  ಒಳಗೊಂಡಿರುವ ಈ ಸಂಘಟನೆಯಿಂದ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

  ಸನ್ಮಾನ : ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆಯ ವಹಿಸಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಮೂಡುಬಿದಿರೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ,  ಮೂಡಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉದ್ಯಮಿ ಹರ್ಷವರ್ಧನ್ ಪಡಿವಾಳ್, ನಾಟಕ ರಚನೆಕಾರ, ಗಾಯಕ, ಕಲಾವಿದ, ಗ್ರಾಫಿಕ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಸಂತೋಷ್ ಪುಚ್ಚೇರಿ ಹಾಗೂ ಉದ್ಯಮಿ ಅಶೋಕ್ ಶೆಟ್ಟಿ  ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

   ಸಂದೇಶ್ ಪಿ.ಜಿ.ಮಾತನಾಡಿ

  ರೋಟರಿ ಕ್ಲಬ್ ನ ಅಧ್ಯಕ್ಷ ಪೂರ್ಣಚಂದ್ರ ಜೈನ್, ವಕೀಲ ಶರತ್ ಡಿ.ಶೆಟ್ಟಿ, ಮೆಸ್ಕಾಂ ಅಧಿಕಾರಿ ಮೋಹನ್ ಕುಮಾರ್ ಶಾಮಿಯಾನ ಸಂಘದ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ಉದ್ಯಮಿಗಳಾದ ದಿವಾಕರ ಶೆಟ್ಟಿ ತೋಡಾರು, ತೇಜಸ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಪವರ್ ಫ್ರೆಂಡ್ಸ್ ನ ಗುರುಪ್ರಸಾದ್ ಸ್ವಾಗತಿಸಿದರು. ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಬಾರಿ ಗೋ ಗ್ರೀನ್ ಎಂಬ ಕಾನ್ಸೆಪ್ಟನ್ನು ಇಟ್ಟುಕೊಂಡು ಹೈವೇ ಬದಿಯಲ್ಲಿ 500 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದೆ. ಜೀವ ಸಂಕುಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸ್ಟಿಕ್ಕರ್ ಗಳನ್ನು ಹಂಚಲಾಗಿದೆ.ಅಲ್ಲದೆ ಸದಸ್ಯತ್ವ ಅಭಿಯಾನವನ್ನೂ ಕೈಗೊಂಡಿದೆ ಎಂದರು.

  ಹೇಮಚಂದ್ರ ಕೈರಂಗಳ ಕಾರ್ಯಕ್ರಮವನ್ನು ನಿರೂಪಿಸಿದರು. ಸುಧಾಕರ ಶೆಟ್ಟಿ ವಂದಿಸಿದರು.

ನಂತರ ಎಂ.ಜೆ ಸ್ಟೆಫ್-ಅಪ್ ತಂಡದ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Post a Comment

0 Comments