ಬಿಜೆಪಿ ಮುಖಂಡ ಸುದರ್ಶನ ಮೂಡುಬಿದಿರೆ ಸಹಿತ 6 ಮಂದಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ
ಮೂಡುಬಿದಿರೆ: ನಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿ ಇದರ ಸುವರ್ಣ ಕರ್ನಾಟಕ ರಂಗ ಅಭಿಯಾನದಂಗವಾಗಿ ಶಿರ್ತಾಡಿ ಕಂದಿರು ಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸುದರ್ಶನ ಮೂಡುಬಿದಿರೆ ಸಹಿತ ಆರು ಮಂದಿಗೆ 'ಸುವರ್ಣ ಕರ್ನಾಟಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಕಂದೀರು ಕ್ಷೇತ್ರದ ಆಡಳಿತ ಮೊಕ್ತೇಸರ ಸೋಮನಾಥ ಶಾಂತಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸುದರ್ಶನ ಮೂಡುಬಿದಿರೆ, ಉದ್ಯಮಿ ಕೆ.ಶ್ರೀಪತಿ ಭಟ್,ರುಕ್ಕಯ್ಯ ಪೂಜಾರಿ ಅಳಿಯೂರು, ಪದ್ಮನಾಭ ಕೋಟ್ಯಾನ್ ಅಳಿಯೂರು,ದೇವಾನಂದ ಭಟ್ ಮಿಜಾರು ಹಾಗೂ ಕೆ.ಅನಂತ ಅಸ್ರಣ್ಣ ಕೇಳ ಇವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶಿರ್ತಾಡಿ ಶ್ರೀ ಬ್ರಹ್ಮ ಗ್ರೂಪ್ಸ್ ನ ಸತೀಶ್ ವಿ.ಶೆಟ್ಟಿ, ಅಳಿಯೂರು ಉಮಲತ್ತಡೆ ಕ್ಷೇತ್ರದ ಅಧ್ಯಕ್ಷ ಪ್ರವೀಣ್ ಭಟ್ ಕಾನಂಗಿ ಅತಿಥಿಗಳಾಗಿ ಭಾಗವಹಿಸಿದ್ದರು.
ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಾಟಕ ರಚನೆಗಾರ,ವಾಲ್ಪಾಡಿ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments