ಮೂಡುಬಿದಿರೆ: ಬೆಳುವಾಯಿಯಲ್ಲಿ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ: ಬೆಳುವಾಯಿಯಲ್ಲಿ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ
ಮೂಡುಬಿದಿರೆ: ಬೆಳುವಾಯಿ ಗ್ರಾಮದ ಬಂಗ್ಲಗುಡ್ಡೆಯ ಹಾಲೋ ಬ್ಲಾಕ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ ಕಾಣೆಯಾಗಿದ್ದಾರೆ.

ಏಪ್ರಿಲ್ 25ರಂದು ಕೆಲಸಕ್ಕೆಂದು ಹೋಗಿದ್ದು, ಸಂಜೆ 5:40 ಗಂಟೆಗೆ ಕೆಲಸ ಮುಗಿಸಿ ಫ್ಯಾಕ್ಟರಿಯಿಂದ ಹೊರಟಿದ್ದರು. ಬೆಳುವಾಯಿಯಿಂದ ಮೂಡುಬಿದಿರೆ ಕಡೆಗೆ ಸರಕಾರಿ ಬಸ್ಸಿನಲ್ಲಿ ತೆರಳಿದ್ದ ಜಗದೀಶ್ ನಂತರ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.
37 ವರ್ಷ ಪ್ರಾಯದ ಜಗದೀಶ್, ಕಪ್ಪು ಕೂದಲು, ಬಿಳಿ ಮೈಬಣ್ಣ ಹಾಗೂ ಸಪೂರ ದೇಹದ ವ್ಯಕ್ತಿತ್ವ ಹೊಂದಿದ್ದಾರೆ. ನಾಪತ್ತೆಯಾಗುವ ಸಂದರ್ಭದಲ್ಲಿ ನೀಲಿ ಜೀನ್ಸ್ ಪ್ಯಾಂಟ್ ಹಾಗೂ ತಿಳಿ ಹಸಿರು ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿದ್ದರು. ಇವರು ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ (ದೂರವಾಣಿ ಸಂಖ್ಯೆ: 08258 - 236333) ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲು ಕೋರಲಾಗಿದೆ.

Post a Comment

0 Comments