ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನಿಂದ 38ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಅಭಯಚಂದ್ರರಿಗೆ "ಶ್ರೀ ಕೃಷ್ಣ ಪ್ರಶಸ್ತಿ" ಪ್ರದಾನ
ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೮ನೇ ವರ್ಷದ ಮೊಸರು ಕುಡಿಕೆ ಸಂಭ್ರಮದೊಂದಿಗೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಮೂಡುಬಿದಿರೆ ಮಂಗಳವಾರ ಆಯೋಜಿಸಿದ ೩೮ನೇ ವರ್ಷದ ಮೊಸರು ಕುಡಿಕೆ ಉತ್ಸವ-ಸಾಂಸ್ಕೃತಿಕ ಕಲಾಪದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಅವರಿಗೆ `ಶ್ರೀಕೃಷ್ಣ ಪ್ರಶಸ್ತಿ-೨೦೨೪' ಪ್ರದಾನಗೈದು ಸಮ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ , ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್‌ನ ಗೌ.ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಅಭಯಚಂದ್ರರ ಬಗ್ಗೆ ಅಭಿನಂದನ ಮಾತುಗಳನ್ನಾಡಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ ರಹಿತ ಅಚಲ ಪಕ್ಷ ನಿಷ್ಠೆಯೊಂದಿಗೆ ಸಮಾಜಮುಖಿ ಚಿಂತನೆಯೊಂದಿಗೆ ತನ್ನನ್ನು ತೊಡಗಿಸಿಕೊಂಡವರು ಎಂದು ಹೇಳಿದರು.
ಮುಖ್ಯ ಅತಿಥಿ, ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, `ರಾಜಕೀಯ ಕೇವಲ ಚುನಾವಣೆ ಸಂದರ್ಭ ಮಾತ್ರ, ಉಳಿದಂತೆ ನಾವು ಸಹೋದರರಂತೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತಿಸುವವರು ಎಂದು ನುಡಿದು ಸಮಾಜದ ಗಣ್ಯರು, ಸಂಘಟನೆಗಳನ್ನು ಗುರುತಿಸಿ ಗೌರವಿಸುವ ಈ ಸಂಘಟನೆ ಎಲ್ಲರಿಗೂ ಮಾದರಿ' ಎಂದರು.
ಸಂಸದ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ., ಉದ್ಯಮಿ ಕೆ. ಶ್ರೀಪತಿ ಭಟ್, ಸುಗಂಧಿ ಹರೀಶ್ ಅಮೀನ್, ಡಾ. ಎಂ. ವಿನಯ ಕುಮಾರ ಹೆಗ್ಡೆ, ಐ. ರಾಘವೇಂದ್ರ ಪ್ರಭು, ಪ್ರಭಾಚಂದ್ರ ಜೈನ್ ಮುಖ್ಯಅತಿಥಿಗಳಾಗಿದ್ದರು.
ಸಮ್ಮಾನ: ಸಂಸ್ಥೆಯ ಗೌ.ಅಧ್ಯಕ್ಷ ಬೊಕ್ಕಸ ಗಣೇಶ ರಾವ್, ಉದ್ಯಮಿ ಸುಗಂಧಿ ಹರೀಶ್ ಅಮೀನ್ ಮುಂಬೈ, ಡಾ. ಸಾತ್ವಿಕಾಕೃಷ್ಣ ಮಂಜೇಶ್ವರ ಇವರನ್ನು ಸಮ್ಮಾನಿಸಲಾಯಿತು. ಪುರಸಭೆ ನೂತನ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, `ಮೂಡಾ' ನೂತನ ಅಧ್ಯಕ್ಷ ಹರ್ಷವರ್ಧನ ಪಡಿವಾಳ ಮತ್ತು ಮುಖ್ಯಮಂತ್ರಿಪದಕ ಪುರಸ್ಕೃತ ಮೂಡುಬಿದಿರೆ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಶ್ರೀ ಕೃಷ್ಣ ವೇಷಧಾರಿ ಶ್ರೀ ಚಂದ್ರಶೇಖರ ಮಳಲಿ ಇವರನ್ನು, ಸಂಘಟನೆಗಳ ಪೈಕಿ ನೇತಾಜಿ ಬ್ರಿಗೇಡ್, ಸರ್ವೋದಯ ಫ್ರೆಂಡ್ಸ್ , ಪವರ್ ಫ್ರೆಂಡ್ಸ್ ಇವುಗಳನ್ನು ಗೌರವಿಸಲಾಯಿತು. ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿ, ಸಂಚಾಲಕ ಬಿ. ಸುರೇಶ್ ರಾವ್, ಪ್ರ.ಕಾರ್ಯದರ್ಶಿ ಸುಶಾಂತ ಕರ್ಕೇರ , ಕೋಶಾಧಿಕಾರಿ ಶಿವಾನಂದ ಶಾಂತಿ ಅತಿಥಿಗಳನ್ನು ಗೌರವಿಸಿದರು. ಗೌ.ಸಲಹೆಗಾರ ಕೆ.ವಿ.ರಮಣ್ ನಿರೂಪಿಸಿದರು. ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ `ನೃತ್ಯೋತ್ಸವಂ-೨೦೨೪' ಜರಗಿತು.
0 Comments