ಅಶ್ವತ್ಥಪುರ: ಶ್ರೀ ಕೃಷ್ಣ ಫ್ರೆಂಡ್ಸ್ ಟ್ರಸ್ಟ್ ನಿಂದ 31ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ
ಮೂಡುಬಿದಿರೆ: ಶ್ರೀ ಕೃಷ್ಣ ಫ್ರೆಂಡ್ಸ್ ಟ್ರಸ್ಟ್ (ರಿ) ಕಡ್ಪಲಗುರಿ ಅಶ್ವತ್ಥಪುರ ಇದರ ಆಶ್ರಯದಲ್ಲಿ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.
ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೋಕ್ತೇಸರ ರಘುನಾಥ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಜನರು ಸೇರಿ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸುವುದಲ್ಲದೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲರೂ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
ತೀರ್ಪುಗಾರರಾಗಿ ಭಾಗವಹಿಸಿದ್ದ ಮಿಜಾರು ಬಂಗಬೆಟ್ಟು ಪ್ರೌಢಶಾಲೆಯ ಶಿಕ್ಷಕಿ ಅನಿತಾ ಶೆಟ್ಟಿ ಮಾತನಾಡಿ ಜನರಲ್ಲಿ ನಮ್ಮ ಧರ್ಮ, ಆಚಾರ ವಿಚಾರ, ಸಂಪ್ರದಾಯದ ಬಗ್ಗೆ ಒಂದಷ್ಟು ಯೋಚನೆ ಆಲೋಚನೆಗಳು, ತರ್ಕಗಳು ಉದ್ದೀಪಗೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ಶ್ರೀ ಕೃಷ್ಣ ಫ್ರೆಂಡ್ಸ್ ಕಡ್ಪಲಗುರಿ ಇದರ ಅಧ್ಯಕ್ಷ ಕೃಷ್ಣ ಪಂಜುರ್ಲಿಗುಡ್ಡೆ ಅಧ್ಯಕ್ಷತೆ ವಹಿಸಿದರು.
ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಸ್ಥಾಪಕಾಧ್ಯಕ್ಷ ಗೋಪಾಲ ಕಡ್ಪಲಗುರಿ,
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಶ್ವತ್ಥಪುರ ಇದರ ಅಧ್ಯಕ್ಷ ಪುರುಷೋತ್ತಮ ಮೇಸ್ತ್ರಿ, ಹಿರಿಯ ಮಾರ್ಗದರ್ಶಕರಾದ ಭುಜಂಗ ಶೆಟ್ಟಿ ಕೊಯಪಾಡಿ, ಶ್ರೀ ಕೃಷ್ಣ ಫ್ರೇಂಡ್ಸ್ ನ ಗೌರವಾಧ್ಯಕ್ಷ ಲಿಂಗಪ್ಪ ಕಡ್ಪಲಗುರಿ, ತೀರ್ಪುಗಾರರಾದ ಶಿಕ್ಷಕಿ ಸಾವಿತ್ರಿ, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಕೊಡಂಗಲ್ಲು ಒಕ್ಕೂಟದ ಸೇವಾ ಪ್ರತಿನಿಧಿ ಮಮತಾ ಕುಲಾಲ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಥಾಪಕ ಶ್ರೀ ಕೃಷ್ಣ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ಗೋಪಾಲಗೌಡ ಕಡ್ಪಲಗುರಿ ಅವರನ್ನು ಸನ್ಮಾನಿಸಲಾಯಿತು.
ಅಶ್ವತ್ಥಪುರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮಾನಾಥ ದೇವಾಡಿಗ,
ಸಂತೆಕಟ್ಟೆ ಗಣೇಶೋತ್ಸವ ಸಮಿತಿಯ
ಗೌರವ ಮಾರ್ಗದರ್ಶಕರಾದ ಅಶ್ವತ್ಥಾಮ,
ಶ್ರೀ ಕೃಷ್ಣ ಫ್ರೆಂಡ್ಸ್ ನವೀರಪ್ಪ ಗೌಡ ಕಡ್ಪಲಗುರಿ, ಮಾರ್ಗದರ್ಶಕರಾದ ರಾಮಚಂದ್ರ ಕೆ.ಎನ್.,
ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅತಿಥಿಗಳಾಗಿ ಭಾಗವಹಿಸಿ ಮುದ್ದುಕೃಷ್ಣ ಮತ್ತು ಬಾಲಕೃಷ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಸ್ಪರ್ಧಾ ವಿಜೇತರು:
ಮುದ್ದುಕೃಷ್ಣ
1. ಗ್ರೀಷಾ ಮೈಂದರಿ
2. ಹವಿಶ್ ನೆಲ್ಲಿತೀರ್ಥ
ಬಾಲ ಕೃಷ್ಣ
1. ಲಿನೀಷ್ ಪಂಜುರ್ಲಿ ಗುಡ್ಡೆ
2. ರಿತುಲ್ ಕಡ್ಪಲಗುರಿ ಬಹುಮಾನವನ್ನು ಪಡೆದುಕೊಂಡರು.
ಪ್ರಸಾದ್ ಅಶ್ವತ್ಥಪುರ ಕಾರ್ಯಕ್ರಮ ನಿರೂಪಿಸಿದರು.
ಮೊಸರು ಕುಡಿಕೆ ಉತ್ಸವದಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆದವು.
0 Comments