ಆ.24,25: ಮೂಡುಬಿದಿರೆಯಲ್ಲಿ ಅಡ್ವೆಂಚರ್ ಡ್ರೈವ್

ಜಾಹೀರಾತು/Advertisment
ಜಾಹೀರಾತು/Advertisment

 ಆ.24,25: ಮೂಡುಬಿದಿರೆಯಲ್ಲಿ ಅಡ್ವೆಂಚರ್ ಡ್ರೈವ್


ಮೂಡುಬಿದಿರೆ: ತ್ರಿಭುವನ್ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ ಮತ್ತು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕಂಪನಿ ಹಯೋಗದೊಂದಿಗೆ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಮಾರ್ಗದರ್ಶನದಲ್ಲಿ ಮೂಡುಬಿದಿರೆ ಅಡ್ವೆಂಚರ್‌ನ 4 ಲನೇ ಆವೃತ್ತಿಯ ಅಂಗವಾಗಿ ಡ್ರೈವ್ 2024ಎಂಬ ಅತ್ಯಾಕರ್ಷಕ ಟಿ.ಎಸ್.ಡಿ (ಟೈಮ್ ಸ್ಪೀಡ್ ಡಿಸ್ಟೆನ್ಸ್) ಮೋಟಾರ್ ಸ್ಪೋರ್ಟ್ ಈವೆಂಟ್ 2024 ಆಗಸ್ಟ್ 24 ಮತ್ತು 25ರಂದು ಮೂಡುಬಿದಿರೆಯ ಮಂಗಳೂರು ಸಮೀಪದ ಪ್ರತಿಷ್ಠಿತ ಶ್ರೀ ಮಹಾವೀರ ಕಾಲೇಜಿನಿಂದ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಅಕ್ಷಯ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ತಜ್ಞರು, ಅನುಭವಿ, ವೈದ್ಯರು, ವಿದ್ಯಾರ್ಥಿಗಳು, ಮಹಿಳೆಯರು, ದಂಪತಿಗಳು, ಬೆದ್ರ ಸ್ಥಳೀಯ ಮತ್ತು ಕ್ಲಬ್ ವಿಭಾಗಗಳನ್ನು ಒಳಗೊಂಡಂತೆ ವಿವಿಧ ಭಾಗವಹಿಸುವಿಕೆಯ ವಿಭಾಗಗಳನ್ನು ಒಳಗೊಂಡಿದೆ.  24ರಂದು ಸಾಯಂಕಾಲ 4.30 ಕ್ಕೆ ಫ್ಲ್ಯಾಗ್ ಆಫ್ ಸಮಾರಂಭ ಮತ್ತು 25 ಆಗಸ್ಟ್ 2024ರಂದು ಬೆಳಗ್ಗೆ  9.15ಕ್ಕೆ ನಡೆಯಲಿದೆ. ಬಹುಮಾನ ವಿತರಣಾ ಸಮಾರಂಭವು ಶ್ರೀ ಮಹಾವೀರ ಕಾಲೇಜಿನಲ್ಲಿ 25ರಂದು ಸಾಯಂಕಾಲ 4.30 ಕ್ಕೆ ನಡೆಯಲಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೋಟಾರ್‌ಸ್ಪೋರ್ಟ್ ಸಾಧಕರಾದ ಪ್ರತಿಜ್ಞಾ ಶೆಟ್ಟಿ, ಮೂಸಾ ಶರಿಫ್, ವಿಕ್ರಮ್ ರಾವ್, ಅಶ್ವಿನ್ ನಾಯಕ್, ಅರ್ಜುನ್ ರಾವ್, ಡೀನ್ ಮಸ್ಕರೇನಾಸ್, ಸುದೀಪ್ ಕೊಟಾರಿ ಮತ್ತು ಅದನ್ ಅಹ್ಮದ್ ಅವರನ್ನು ಸನ್ಮಾನಿಸಲಾಗುವುದು ಎಂದರು.

ಪ್ರಾಜೆಕ್ಟ್ ಮ್ಯಾನೇಜರ್ ಅದೀಶ್ ಡಿಸೋಜ, ಕೋಶಾಧಿಕಾರಿ ರಾಮಕೃಷ್ಣ ಬಿ. ಎನ್. ಸುದ್ದಿಗೋಷ್ಠಿಯಲ್ಲಿದ್ದರು.

Post a Comment

0 Comments