ಮೂಡುಬಿದಿರೆಯಲ್ಲಿ ಶ್ರೀರಾಮನಾಮ ಜಪ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಶ್ರೀರಾಮನಾಮ ಜಪ ಅಭಿಯಾನ


ಮೂಡುಬಿದಿರೆ: ಗೌಡ ಸಾರಸ್ವತ ಬ್ರಾಹ್ಮಣ ( ಜಿ.ಎಸ್.ಬಿ) ಸಮಾಜದ ಗುರುಪೀಠಗಳಲ್ಲೊಂದಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರ್ತಗಾಳಿ ಗೋವಾ ಇದರ ಸಾರ್ಧ ಪಂಚಶತಮಾನೋತ್ಸವ (550ವರ್ಷ) ಅಂಗವಾಗಿ 550 ದಿನಗಳ ( 2024ರ ಎಪ್ರಿಲ್ 17ರಿಂದ 2025ರ ಅಕ್ಟೋಬರ್ 18) 550 ಕೋಟಿ ಶ್ರೀ ರಾಮ ನಾಮ ಜಪ ಅಭಿಯಾನ ಸಂಸ್ಥಾನದ ಶಾಖಾ ಮಠ ಸಹಿತ ಹಲವೆಡೆ ದೇವಸ್ಥಾನಗಳಲ್ಲಿ ಈಗಾಗಲೇ ನಡೆಯುತ್ತಿದೆ.ಕಳೆದ ಜೂನ್ 15ರಿಂದ ಮೂಡುಬಿದಿರೆಯ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠೆಯ ಸುದಿನ ಆರಂಭಗೊಂಡಿರುವ ರಾಮ ಜಪ ಅಭಿಯಾನ 33ನೇ ದಿನವಾದ ಬುಧವಾರ ಆಷಾಢ ಏಕಾದಶಿಯಂದು ಈವರೆಗಿನ ಒಟ್ಟು ಜಪ ಸಂಖ್ಯೆ 50 ಲಕ್ಷ ದಾಟಿದೆ.

ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ತಲಾ ಒಂದು ಗಂಟೆ ಅವಧಿಯ ಎರಡು ಪಾಳಿಗಳು ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಒಂದು ಪಾಳಿ ಒಟ್ಟು ಮೂರು ಪಾಳಿಗಳಲ್ಲಿ ಜಿ.ಎಸ್.ಬಿ. ಸಮಾಜ ಬಾಂಧವರು ನಿತ್ಯವೂ ಸಂಜೆಯಿಂದ ರಾತ್ರಿ ಶ್ರೀ ರಾಮ ಜಪ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

Post a Comment

0 Comments