ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಅವಲಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಪೌಷ್ಟಿಕ ಆಹಾರ ಕಿಟ್ ವಿತರಣಾ ಸಮಾರಂಭ
ಇಂದು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ *ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಅವಲಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಪೌಷ್ಟಿಕ ಆಹಾರ ಕಿಟ್ ವಿತರಣಾ ಸಮಾರಂಭವು* ನಡೆಯಿತು ಶಿಬಿರವನ್ನು ಪಂಚಾಯತ್ ಅಧ್ಯಕ್ಷರಾದ ಉದಯ ಪೂಜಾರಿ ಉದ್ಘಾಟಿಸಿದರು ಮತ್ತು ಬಹಳ ಉಪಯುಕ್ತ ವಾದ ಕಾರ್ಯಕ್ರಮ ಇದಾಗಿದ್ದು ವರ್ಷವಿಡೀ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರಿಗೆ ಆರೋಗ್ಯ ಭದ್ರತೆಯ ಜತೆಗೆ ಪೌಷ್ಟಿಕಾಂಶ ಉಳ್ಳ ಆಹಾರ ಧಾನ್ಯ ನೀಡುತಿರುವುದು ಸರಕಾರದ ಯೋಜನೆ ಉತ್ತಮವಾಗಿದೆ ಎಂದು ಶುಭ ಹಾರೈಸಿದರು ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸುಶೀಲಾ ಸದಸ್ಯರಾದ ಜಯಂತ ಹೆಗ್ಡೆ , ಆಶಾಲತ , ಮೋಹಿನಿ , ಪ್ರತಿಮ ಸುನಂದ ,ಲಲಿತ ಹಾಗೂ ಶಶಿಧರ ಎಂ ಉಪಸ್ಥಿತಿ ಇದ್ದರು ಕಾರ್ಮಿಕ ಇಲಾಖೆಯ ಸಾಗರ್ ಯೋಜನೆಯ ವಿವರ ನೀಡಿದರು ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು ಉಳಿದಂತೆ ಸಿಬ್ಬಂದಿ ಗಳಾದ ರೇಣುಕ & ಲಕ್ಷ್ಮಣ ಸಹಕರಿಸಿದರು
0 Comments