ಮಾತೃಭೂಮಿಯನ್ನು ಸದಾ ಗೌರವಿಸಬೇಕು:- ಬಿ.ಕೆ ಧನಂಜಯ್ ಹೇಳಿಕೆ:
ಮೂಡುಬಿದಿರೆ: ವಿದ್ಯಾರ್ಥಿಗಳು ಸದಾ ಮಾತೃಭೂಮಿಯನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಹಾಗೂ ರಾಜಕೀಯದ ಅರಿವು ನಿಮಗಿರಬೇಕು. ಚುನಾವಣೆ ಮತ್ತು ಅದರ ನಿಯಮಗಳನ್ನು ತಿಳಿಯುವುದರೊಂದಿಗೆ ಮತದಾನದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಯು ಅರಿಯುವಂತಾಗಬೇಕು.
ಎಂದಿಗೂ ಮತವನ್ನು ಹಣಕ್ಕಾಗಿ ಮಾರಿಕೊಳ್ಳಬಾರದು ಎಂದು ಬೆಳ್ತಂಗಡಿಯ ಪ್ರಸಿದ್ಧ ವಕೀಲರಾದ ರೊ. ಬಿ.ಕೆ ಧನಂಜಯ ರಾವ್ ಹೇಳಿದರು.
ಅವರು ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನರು ಎಲ್ಲರಿಗೂ ತಮಗಿಷ್ಟವಾದ ಅಭ್ಯರ್ಥಿಗೆ ಮತ ನೀಡುವ ಹಕ್ಕಿದೆ. ಅದನ್ನು ಪ್ರತಿಯೊಬ್ಬರು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮನ್ನು ಆಳುವ ನಾಯಕರು ನಮ್ಮ ಸಮಸ್ಯೆಗಳಿಗೆ ಅಗತ್ಯತೆಗಳಿಗೆ ಸ್ಪಂದಿಸುವಂತಿರಬೇಕು. ಇಲ್ಲವಾದರೇ ಪ್ರಶ್ನಿಸುವ ಅಧಿಕಾರ ನಮಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ತುಂಬಾ ಮುಖ್ಯವಾದದ್ದು. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅಂತಹ ಶಾಲಾ ಸಂಸತ್ತಿಗೆ ಸಂಬಂಧಿಸಿದ ಚುನಾವಣೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲ್ಗೊಂಡಿದ್ದೀರಿ. ಈ ಮೂಲಕ ನಮ್ಮ ಸಂವಿಧಾನ, ಆಡಳಿತದ ಬಗ್ಗೆ ಈ ಹಂತದಲ್ಲಿ ಅರಿವನ್ನು ಮಾಡಿಸಿಕೊಳ್ಳಬೇಕು. ಒಬ್ಬ ಉತ್ತಮ ನಾಯಕನಾಗುವ ಸಾಮರ್ಥ್ಯ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ಬೇಕಾದ ಮೌಲ್ಯಗಳನ್ನು ಜ್ಞಾನವನ್ನು ಆತ್ಮ ವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪ್ರತಿ ದಿನ ಹೊಸತನ್ನು ಕಲಿಯುತ್ತೀರಿ. ಒಳ್ಳೆಯ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿ ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು.
ಮುಖ್ಯೊಪಾಧ್ಯಾಯರಾದ ಶಿವಪ್ರಸಾದ್ ಭಟ್ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ ಮುಖ್ಯೋಪಾಧ್ಯಾಯ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ದಾಮೋದರ್ ಸಚಿವರುಗಳಿಗೆ ಖಾತೆಗಳನ್ನು ಹಂಚಿದರು, ಶಾಲಾ ಸಂಸತ್ತಿನ ನಾಯಕನಾಗಿ ಶಶಾಂಕ್ ಎಸಿ, ವಿರೋಧ ಪಕ್ಷದ ನಾಯಕನಾಗಿ ಗ್ಯಾನ್ ಕೆ ಕಾಳೆ, ಸಭಾಪತಿಯಾಗಿ ಯಶಸ್ವಿನಿ ಉಪ ನಾಯಕಿ ಚಿನ್ಮಯಿ ಅರುಣ್, ಕ್ರೀಡೆ- ಮನ್ವಿತ್ ರಾಜ್ ಜೈನ್, ಆರೋಗ್ಯ- ಲಿಖಿತ್ ಗೌಡ, ಸಾಂಸ್ಕೃತಿಕ- ಸೋನಿಕ ಶಿಸ್ತು- ತ್ರಿಶೂಲ್, ಆಹಾರ- ಧ್ರುತಿ ಪಾಟೀಲ್ ಪರಿಸರ- ಜೋವಿನ್, ಜಲ ಮತ್ತು ವಿದ್ಯುತ್- ಖಾತೆಗಳ ಸಚಿವರಾಗಿ ಧನ್ಯತಾ ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿನಿ ಅದಿತಿ ಕಾರ್ಯಕ್ರಮವನ್ನು ನಿರೂಪಿಸಿದರು.
0 Comments