ಮೂಡುಬಿದಿರೆಯಲ್ಲಿ ಐವನ್ ಡಿಸೋಜಾರಿಗೆ ಸನ್ಮಾನ
ಮೂಡುಬಿದಿರೆ: ವಿಧಾನಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದ ಐವನ್ ಡಿಸೋಜ ಅವರಿಗೆ
ಕೆಥೋಲಿಕ್ ಸಭಾ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚಚ್೯ ಸಭಾಂಗಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ ನಾನು ಕಾಂಗ್ರೆಸ್ ಪಕ್ಷನಿಷ್ಠೆ ಯ ಬದ್ಧತೆಯಿಂದ ಕೆಲಸ ಮಾಡಿದ್ದು ತನ್ನ ಸೇವೆಯನ್ನು ಪರಿಗಣಿಸಿ ಎರಡನೇ ಅವಧಿಗೆ ಈ ಸನ್ಮಾನ ಲಭಿಸಿದೆ. ಸಿಕ್ಕಿದ ಅವಕಾಶವನ್ನು ಬಳಸಿ ನೋಂದವರ ಸಹಾಯ ಹಸ್ತ ಒದಗಿಸುವ ಆದ್ಯತೆ ನೀಡುತ್ತೇವೆ. ಸಿದ್ದರಾಮಯ್ಯ ಸರಕಾರವು ಅಲ್ಪಸಂಬ್ಯಾತರ ಅಭಿವೃದ್ದಿಗಾಗಿ ಒತ್ತು ನೀಡಿತ್ತಿದ್ದು ಈ ಬಾರಿ ಬಜೆಟ್ ನಲ್ಲಿ 200 ಕೋಟಿ ರೂ ಮೀಸಲಿಸಿದೆ. ಇದನ್ನು ಸಮಾಜ ಬಾಂಧವರ ಸದುಪಯೋಗಪಡಿಸಿಕೊಳ್ಳಬೇಕು.
ಮೂಡುಬಿದರೆ ವಲಯ ಚಚ್೯ಗಳ ಮುಖ್ಯ ಧರ್ಮಗುರು, ಓನಿಲ್ ಡಿಸೋಜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಐವನ್ ಡಿಸೋಜ ಅವರ ವ್ಯಕ್ತಿತ್ವದಲ್ಲಿಯೇ ನಾಯಕತ್ವ ಗುಣವಿದೆ. ಹಾಗಾಗಿ ಅವರು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಮತ್ತು ತ್ಯಾಗ ಮತ್ತು ಸೇವೆಯ ಗುಣವಿರುವವರು ಮಾತ್ರ ನಾಯಕರಾಗಲು ಸಾಧ್ಯ ಎಂದರು.
ವಕೀಲ ಪ್ರವೀಣ್ ಲೋಬೊ ಅಭಿನಂದನಾ ಭಾಷಣಗೈದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕಥೋಲಿಕ ಸಭಾ ಮೂಡುಬಿದಿರೆ ವಲಯ ಸಮಿತಿಯ ಆದ್ಯಾತ್ಮಿಕ ನಿರ್ದೇಶಕರು ವಂ.ಫಾ.ದೀಪಕ್ ನೋರೋನ್ಹ ,
ಅಭಿನಂದನ ಸಮಿತಿಯ ಸಂಚಾಲಕ ರೋನಾಲ್ಡ್ ಸೇರಾವೊ , ಕಾರ್ಯದರ್ಶಿಗಳಾದ ರೋಷನ್ ಮಿರಂದ, ಅವಿಲ್ ಡಿ"ಸೋಜ, ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷ ಅಲ್ವಿನ್ ರೋಡ್ರಿಗಸ್ ಸ್ವಾಗತಿಸಿದರು. ರಾಜಕೀಯ ಸಂಚಾಲಕಿ ಅಗ್ನೇಸ್ ಡಿಸೋಜಾ ವಂದಿಸಿದರು.ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.
0 Comments