ಹೃದಯಾಘಾತದಿಂದ ಬಸ್ ಏಜೆಂಟ್ ಗಣೇಶ್ ನಿಧನ
ಕಳೆದ ಕೆಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ಬಸ್ ಏಜೆಂಟ್ ಆಗಿ ದುಡಿಯುತ್ತಿದ್ದ ಗಣೇಶ್ (45) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಮೂಡುಬಿದಿರೆ ಪೇಟೆಗೆ ಬಂದು ಪತ್ರಿಕೆ, ಹೂ ಇತ್ಯಾದಿಯನ್ನು ತೆಗೆದುಕೊಂಡ ಅವರು ಪೇಪರ್ ಏಜೆಂಟ್ ಅವರಲ್ಲಿ ಕಟೀಲು ದೇವಸ್ಥಾನಕ್ಕೆ ಹೋಗಲಿದೆ ಎಂದು ತಿಳಿಸಿ ಮನೆಗೆ ಹೋದವರಿಗೆ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣ ಅವರನ್ನು ಜಿ.ವಿ. ಪೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಲ್ಲಿ ಅವರು ಹೃದಯಾಘಾತ ದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಗಣೇಶ್ ಅವರಿಗೆ ಕಳೆದ 20 ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಯ ನಂತರ ಅವರು ಸುಧಾರಿಸಿಕೊಂಡಿದ್ದರು.
0 Comments