ಕರಾವಳಿ ಕೇಸರಿ ಸೇವಾ ಟ್ರಸ್ಟ್ ನಿಂದ ದರೆಗುಡ್ಡೆ ಶಾಲೆಗೆ ಉಚಿತ ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಕರಾವಳಿ ಕೇಸರಿ ಸೇವಾ ಟ್ರಸ್ಟ್ ನಿಂದ ದರೆಗುಡ್ಡೆ ಶಾಲೆಗೆ ಉಚಿತ ಪುಸ್ತಕ ವಿತರಣೆ

ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ), ಕರಾವಳಿ ಕೇಸರಿ ಮಹಿಳಾ ಘಟಕ  (ರಿ), ದರೆಗುಡ್ಡೆ ಇದರ ವತಿಯಿಂದ ದರೆಗುಡ್ಡೆ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.  ಶಾಸಕ ಉಮನಾಥ್ ಕೋಟ್ಯಾನ್  ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ  ಕರಾವಳಿ ಕೇಸರಿ ಸೇವಾ ಟ್ರಸ್ಟ್ ಸಂಘಟನೆಯ ಹಲವಾರು ವರ್ಷಗಳಿಂದ ಮಕ್ಕಳಿಗೆ ಪುಸ್ತಕ ನೀಡುತ್ತಿರುವುದು ಮತ್ತು ಅನಾರೋಗ್ಯದಿಂದ ಇರುವವರಿಗೆ ಸಹಾಯಧನವನ್ನು ನೀಡುತ್ತಿರುವುದು   ಸಮಾಜ ಮೆಚ್ಚುವಂತ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಸಂಘಟನೆಯ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.  


ಸಮಾಜ ಸೇವಕಿ  ರಮಿತಾ ಶೈಲೇಂದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳಿಗೆ ವಿದ್ಯೆಯ ಜೊತೆಗೆ ನಮ್ಮ ಧರ್ಮದ ಸಂಸ್ಕೃತಿಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರ ಇರಿಸುವಂತ ಪ್ರಯತ್ನ ಆಗಬೇಕು ಎಂದು  ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು, ಪಂಚಾಯತ್ ಉಪಾಧ್ಯಕ್ಷರಾದ ನಳಿನಿ ಹರೀಶ್ ಪಂಚಾಯತ್  ಸದಸ್ಯರಾದ ಪ್ರಸಾದ್ ಬಿ ಪೂಜಾರಿ  ಮಹಿಳಾ ಘಟಕದ ಅಧ್ಯಕ್ಷ ಬೇಬಿ ಚಿದಾನಂದ, ಪಂಚಾಯತ್  ಸದಸ್ಯ  ಶಶಿಕಲಾ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಕರುಣಾಕರ ದೇವಾಡಿಗ ಸ್ವಾಗತಿಸಿದರು.  ಸಹ ಶಿಕ್ಷಕರಾದ ಅರುಣ್ ನಿರೂಪಣೆ ಮಾಡಿದರು.

Post a Comment

0 Comments