ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನ ಆಚರಣೆ

ಮೂಡುಬಿದಿರೆಯ ಅರಮನೆ ಬಾಗಿಲಿನಲ್ಲಿರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳು ಯೋಗಾಸನವನ್ನು ಮಾಡುವ  ಮೂಲಕ ಯೋಗ ದಿನವನ್ನು ಆಚರಿಸಲಾಯಿತು.

  ಮೂಡುಬಿದಿರೆ ಆಯುಷ್ ವೆಲ್ ನೆಸ್ ಸೆಂಟರ್ ನ ಡಾ.ಸಪ್ನಾ ರೈ ದೀಪ ಬೆಳಗಿಸಿ ಯೋಗ ದಿನಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಪ್ರಾಚೀನ ಕಾಲದಲ್ಲಿ ಬಂದಂತಹ ಪದ್ಧತಿ ಯೋಗವಾಗಿದ್ದು ಇದು ನಮ್ಮ ಪೂರ್ವಜನರು ನಮಗೆ ನೀಡಿರುವ ಆಸ್ತಿಯಾಗಿದೆ. ಇಂದಿನ ಜೀವನ ಶೈಲಿಯಲ್ಲಿ ಆಗುತ್ತಿರುವ ಅಡ್ಡ ಪರಿಣಾಮಗಳನ್ನು ಯೋಗವು ತಡೆಯುತ್ತದೆ. ಯೋಗವನ್ನು ಹೆತ್ತವರು ಪ್ರತಿದಿನ ಮಾಡುವುದರಿಂದ  ಅದರ ಪ್ರಾಮುಖ್ಯತೆಯನ್ನು ಮಕ್ಕಳಿಗೆ ಹೇಳಿ ಅವರಲ್ಲಿ ಆಸಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.


 ಯೋಗ ಶಿಕ್ಷಕಿ ಸವಿತಾ, ಶುಭ ಹಾಗೂ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಈ ಸಂದರ್ಭದಲ್ಲಿದ್ದರು.

Post a Comment

0 Comments