ಜೆ ಇ ಇ ಅಡ್ವಾನ್ಸ್ಡ್ ಎಕ್ಸಲೆಂಟ್ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ
ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟçಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅ೦ಕಗಳನ್ನು ಪಡೆದು ಉತ್ಕೃಷ್ಟ ಸಾಧನೆಗೈದಿದ್ದಾರೆ.
ಡಾ ಪ್ರಶಾ೦ತ್ ಹೆಗ್ಡೆ ಮತ್ತು ಶ್ರೀಮತಿ ಕೋಕಿಲಾ ಹೆಗ್ಡೆ ಅವರ ಮಗ ನಿಶಾ೦ತ್ ಹೆಗ್ಡೆ ರಾಷ್ಟç ಮಟ್ಟದಲ್ಲಿ ೪೩೪೯ ನೇ ಸ್ಥಾನ ( ಉ ಒ), ಚಿರಾಗ್ ಕ೦ಚಿರಾಯ್ ೫೭೩ ನೇ ಸ್ಥಾನ (ಅ), ಸಾನ್ವಿ ಎಸ್ ಟಿ ೧೪೦೪ ನೇ ಸ್ಥಾನ (ಅ), ಸ೦ಜಯ್ ಬಿರಾದರ್ ೨೨೦೦ ನೇ ಸ್ಥಾನ (ಅ), ಸಚಿನ್ ೩೦೨೩ನೇ ಸ್ಥಾನ (ಅ), ರೋಹನ್ ಎಸ್ ೪೨೬೩ ನೇ ಸ್ಥಾನ (ಅ) ಪಡೆದು ಉತ್ತಮ ಸ್ಥಾನ ಗಳಿಸುವುದರ ಮೂಲಕ ಸ೦ಸ್ಥೆಗೆ ಕೀರ್ತಿ ತ೦ದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸ೦ಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃ೦ದದವರು ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.
0 Comments