ಕರಾಡ ಬ್ರಾಹ್ಮಣ ಸಮಾಜ ಉತ್ತರ ಭಾರತ ತೀರ್ಥಯಾತ್ರೆ ಯಶಸ್ವಿ ಎಂಟನೇ ದಿನದತ್ತ

ಜಾಹೀರಾತು/Advertisment
ಜಾಹೀರಾತು/Advertisment

 ಕರಾಡ ಬ್ರಾಹ್ಮಣ ಸಮಾಜ ಉತ್ತರ ಭಾರತ ತೀರ್ಥಯಾತ್ರೆ ಯಶಸ್ವಿ ಎಂಟನೇ ದಿನದತ್ತ


ದಕ್ಷಿಣ ಕನ್ನಡ : ಸಮಾಜದ ಮುಂದಾಳು ವೇದಮೂರ್ತಿ ಗಿರಿಧರ ಭಟ್ಟರ ಮುಂದಾಳುತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತೀರ್ಥಯಾತ್ರೆ ಈ ಬಾರಿ ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕ,ಮೂಡಬಿದಿರೆ ಸಹಭಾಗಿತ್ವದಲ್ಲಿ  ಹಾಗೂ ಆತ್ಮ ನಿರ್ಭರ ಟೂರ್ಸ್ ಮಾರ್ಗದರ್ಶನದಲ್ಲಿ ರಾಮಚಂದ್ರ ಪಂಡಿತ್, ಸುನಿಲ್ ಗರ್ದೆ, ಶ್ರೀಕಾಂತ್ ರಾವ್  ಸಹಾಯದೊಂದಿಗೆ   ಉತ್ತರ ಭಾರತ ಯಾತ್ರೆಯು  ಎಂಟನೇ ದಿನ ಯಶಸ್ವಿಯಾಗಿ ಪೂರೈಸಿದ್ದು, ಯಾತ್ರೆಯ  ಪ್ರಸಿದ್ಧ ತೀರ್ಥಕ್ಷೇತ್ರ ಗಯಾವನ್ನು ತಲುಪಿತು. 


    ದಿನಾಂಕ 6.6.2024 ರಂದು ಮುಂಜಾನೆ ಮಂಗಳೂರಿನ ಕಂಕನಾಡಿ ರೈಲು ನಿಲ್ದಾಣದಿಂದ ರೈಲು  ಪ್ರಯಾಣದ ಮುಖಾಂತರ ಹೊರಟ ಸುಮಾರು 100 ಮಂದಿ ಕರಾಡ ಬ್ರಾಹ್ಮಣ ಸಮಾಜದ  ತಂಡ ದಿನಾಂಕ 8ರಂದು ಪ್ರಯಾಗರಾಜ ತಲುಪಿ ಅಲ್ಲಿ ವಿವಿಧ ತೀರ್ಥಕ್ಷೇತ್ರಗಳ ಸಂದರ್ಶನ ನಡೆಸಿ, ದಿನಾಂಕ 10 ರಂದು ಅಯೋಧ್ಯ ಶ್ರೀ ರಾಮನ ದರ್ಶನ ದರ್ಶನ ಪೂರೈಸಿ, ದಿನಾಂಕ 11 ರಂದು ಕಾಶಿ ತಲುಪಿದ್ದು, ಅಲ್ಲಿ ಗಂಗಾ ಆರತಿ  ವೀಕ್ಷಣೆ ಕಾಶಿ ವಿಶ್ವನಾಥ ದರ್ಶನ ಮಾಡಿ ದಿನಾಂಕ 13 ರಂದು ಗಯಾ ತಲುಪಿದ್ದು, ತೀರ್ಥಕ್ಷೇತ್ರಗಳ ಸಂದರ್ಶನ ಮುಂದುವರೆದಿದೆ, 

 ಮುಂದಿನ ದಿನಗಳಲ್ಲಿ ಯಾತ್ರೆಯ ದೆಹಲಿ ತಲುಪಲಿದ್ದು, ಅಲ್ಲಿಂದ ರೈಲು ಮುಖಾಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ ಇಂದು ಸಂಘಟಕರು ತಿಳಿಸಿದ್ದಾರೆ.

Post a Comment

0 Comments