ಶಿಕ್ಷಣ ಜೀವನದ ಅವಿಭಾಜ್ಯ ಅಂಗ:ಉಚಿತ ಪುಸ್ತಕ ವಿತರಿಸಿ ಮಹೇಶ್ ಠಾಕೂರ್ ಅಭಿಮತ

ಜಾಹೀರಾತು/Advertisment
ಜಾಹೀರಾತು/Advertisment

 ಶಿಕ್ಷಣ ಜೀವನದ ಅವಿಭಾಜ್ಯ ಅಂಗ:ಉಚಿತ ಪುಸ್ತಕ ವಿತರಿಸಿ ಮಹೇಶ್ ಠಾಕೂರ್ ಅಭಿಮತ

ಉಡುಪಿಯ ಶಿವ ಪ್ರೇರಣ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಮತ್ತು ಕೊಡೆ ವಿತರಣಾ ಕಾರ್ಯಕ್ರಮ ನಡೆಯಿತು. ಪುಸ್ತಕವನ್ನು ವಿತರಿಸಿದ ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ಮಹೇಶ್ ಠಾಕೂರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳೇ ನಾಳಿನ ಭವ್ಯ ಭಾರತದ ಪ್ರಜೆಗಳು. ಶಿಕ್ಷಣವು ಎಂದೆಂದಿಗೂ ಅಳಿಸಲಾಗದಂತಹ ಜ್ಞಾನ ಭಂಡಾರ. ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಗೆ ಆಗಬಾರದೆಂಬ ಕಾರಣಕ್ಕೆ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವ ಪ್ರೇರಣ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಗಳಾದ ಅಶ್ವಿನಿ ಮಹೇಶ್ ಠಾಕೂರ್, ಟ್ರಸ್ಟಿಗಳಾದ ರಮಾನಂದ್ ಸಾಮಂತ್ ಸರಳೇಬೆಟ್ಟು, ಕೃಷ್ಣಪ್ಪ ಸಾಮಂತ್ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಗ್ರೇಸಿ ರೆಬೆಲ್ಲೋ ಸ್ನೇಹ ಸಂಗಮ ಅಧ್ಯಕ್ಷರು ಗುರುರಾಜ್ ಭಂಡಾರಿ ಸರಳೆಬೆಟ್ಟು ಪ್ರಧಾನ ಕಾರ್ಯದರ್ಶಿಗಳಾದ ಸಂದೇಶ ಪ್ರಭು ಹಾಗೂ ನಿರೂಪಣೆ ಚೇತನ ಗಣೇಶ್, ಭೂತ್ ಅಧ್ಯಕ್ಷರಾದ ನಿತ್ಯಾನಂದ ಶೆಣೈ ಹಾಗೂ ಸ್ನೇಹ ಸಂಗಮದ ಸದಸ್ಯರುಗಳಾದ ಸುನಿಶಾ, ಪೂರ್ಣಿಮಾ, ವಿದ್ಯಾ ,ವೀಣಾ ಪಾಟೀಲ್, ದೀಪಿಕಾ ಪಾಟೀಲ್, ಆಶಾ ಪಾಟೀಲ್, ಹಾಗೂ ಸರಳೇಬೆಟ್ಟು ಶಾಲೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Post a Comment

0 Comments