ಮೂಡುಬಿದಿರೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿ ಇಲ್ಲಿನ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಭಾನುವಾರ ನಡೆಯಿತು.
ಅನೇಕ ವರ್ಷಗಳಿಂದ ತಾವು ಕಲಿತ ಶಾಲೆಗೆ ನಿರಂತರವಾಗಿ ಸಹಾಯಹಸ್ತ ನೀಡುತ್ತಾ ಬಂದಿರುವ ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಖ್ಯಾತ ಚರ್ಮರೋಗ ತಜ್ಞ ಡಾಕ್ಟರ್ ಯಶೋಧರ ಇವರು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸುಮಾರು ರೂ 75000/- ಬೆಲೆಯ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಅವರ ಮಾತೃಶ್ರೀ ರುಕ್ಮಿಣಿ ಅಮ್ಮ ಹಾಗೂ ಪತ್ನಿ ಯಶವಂತಿಯವರು ಉಪಸ್ಥಿತರಿದ್ದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಇವರು ಮಾತನಾಡಿ ಡಾ. ಯಶೋಧರ್ ರವರು ನೀಡುವ ಕೊಡುಗೆಯಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕಿ ಮೃದುಲಾ ಅವರು ಈ ಕಾರ್ಯವನ್ನು ಶ್ಲಾಘಿಸಿದರು. ಪ್ರತಿಮಾ ನಾಯಕ್ ಸ್ವಾಗತಿಸಿದರು. ಸುಮಲತಾ ರವರು ನಿರೂಪಣೆ ಮಾಡಿ ರೂಪಲತಾರವರು ವಂದಿಸಿದರು.
0 Comments