ಜೆಸಿಐ ತ್ರಿಭುವನ್ ಮೂಡುಬಿದಿರೆ ಇದರ ವತಿಯಿಂದ ಏ .ಜೆ ಸೋನ್ಸ್ ಐಟಿಐ ಕಾಲೇಜಿನಲ್ಲಿ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿ
ಮೂಡುಬಿದಿರೆ: ಜೆಸಿಐ ತ್ರಿಭುವನ್ ಮೂಡುಬಿದಿರೆ ಇದರ ವತಿಯಿಂದ ಏ .ಜೆ ಸೋನ್ಸ್ ಐಟಿಐ ಕಾಲೇಜಿನಲ್ಲಿ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವು ಬುಧವಾರ ನಡೆಯಿತು.
ಪ್ರಾಂಶುಪಾಲರಾದ ಶ್ರೀಕಾಂತ್ ಹೊಳ್ಳ ಮತ್ತು ಜೆ.ಟಿ.ಒ ಆಶ್ರಿತ ಉಪಸ್ಥಿತರಿದ್ದರು.
ತನ್ಮಯ್ ಟೆಕ್ನಾಲಜಿ ಯಾ ತರಬೇತಿದಾರರಾದ ಮತ್ತು ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ಲೀಡ್ ಆಂಡ್ರಾಯ್ಡ್ ಟಿವಿ, ಸ್ಮಾರ್ಟ್ ಟಿವಿ ಯ ಮದರ್ ಬೋರ್ಡ್ ಪ್ಯಾನಲ್ ಮತ್ತು ಪವರ್ ಸಪ್ಲೈ ವಿಭಾಗವನ್ನು ವಿವರಿಸಿದರು.
ತರಬೇತಿಯಲ್ಲಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 Comments