ಮೂಲ್ಕಿ ವಲಯ ಭಜನಾ ಪರಿಷತ್ ಅಧ್ಯಕ್ಷರಾಗಿ ರಾಘವ ಸನಿಲ್ ಆಯ್ಕೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಲಯ ಸಭೆಯು ಪಡುಪಣಂಬೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯಕ್ರಮ ಉದ್ಘಾಟಿಸಿ,
ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಈ ನಿಟ್ಟಿನಲ್ಲಿ ಧರ್ಮಸ್ಥಳದ ಖಾವಂದರು ಅನೇಕ ವರ್ಷಗಳಿಂದ ಜನಸೇವೆಗೈಯ್ಯುತ್ತಾ ಬರುತ್ತಿದ್ದಾರೆ. ಈ ಭಾಗದ ಜನರಿಗೂ ಭಜನಾ ಪರಿಷತ್ ಮೂಲಕ ಸದುಪಯೋಗಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ ಬಗ್ಗೆ ಮಾಹಿತಿ ನೀಡಿದರು.ತಾಲೂಕು ಯೋಜನಾಧಿಕಾರಿಗಳಾದ ಕರುಣಾಕರ್ ಆಚಾರ್ಯರವರು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿಸಿ ಸಮಗ್ರ ಮಾಹಿತಿ ನೀಡಿದರು. ಅರಸು ಪ್ರಾಡಕ್ಟ್ ಮಾಲಕರಾದ ಗೌತಮ್, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಹರಿಶ್ಚಂದ್ರ ಕೋಟ್ಯಾನ್, ಜನಜಾಗೃತಿ ವಲಯಾಧ್ಯಕ್ಷರಾದ ವಿನೋದ್ ಸಾಲ್ಯಾನ್, ಯೋಜನಾ ವಲಯಾಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಪರಿಷತ್ ನೂತನ ವಲಯಾಧ್ಯಕ್ಷರಾಗಿ ರಾಘವ ಸನಿಲ್, ಉಪಾಧ್ಯಕ್ಷರಾಗಿ ಕರುಣಾಕರ್, ಕಾರ್ಯದರ್ಶಿಗಳಾಗಿ ಧನಂಜಯ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಹೇಮಾವತಿ, ಕೋಶಾಧಿಕಾರಿಯಾಗಿ ರವೀಂದ್ರ ರವರು ಆಯ್ಕೆಯಾದರು. ಮೂಲ್ಕಿ ವಲಯದ 24 ಮಂಡಳಿಗಳ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.ಮೇಲ್ವಿಚಾರಕಿಯವರಾದ ಶ್ರೀಮತಿ ನಿಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಮೋಹಿನಿ ಯವರು ಸ್ವಾಗತಿಸಿದರು. ವಿದ್ಯಾ ರವರು ವಂದಿಸಿದರು.
0 Comments