ತೆಂಕಮಿಜಾರು ಗ್ರಾ.ಪಂ.ನಿಂದ ಪರಿಸರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ತೆಂಕಮಿಜಾರು ಗ್ರಾ.ಪಂ.ನಿಂದ ಪರಿಸರ ದಿನಾಚರಣೆ

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಅಶ್ವತ್ಥಪುರ ಅಂಗನವಾಡಿ ಬಳಿ ಗಿಡ ನೆಡುವುದರ ಮೂಲಕ  ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

 ಪಂಚಾಯತ್ ಅಭಿವೃದ್ಧಿ ಅಧಿಕಾರಿ  ರೋಹಿಣಿ. ಬಿ. ಅವರು ಗಿಡವನ್ನು ನೆಟ್ಟು ಚಾಲನೆಯನ್ನು ನೀಡಿದರು.

ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶಾಲಿನಿ ಕೆ ಸಾಲಿಯಾನ್,   ಗ್ರಾಮ ಪಂಚಾಯತ್ ಸದಾಸ್ಯರಾದ ಬಿ ಎಲ್ ದಿನೇಶ್ ಕುಮಾರ್, ದ್ವಿ. ದ .ಲೆ ಸಹಾಯಕ ರಮೇಶ್ ಬಂಗೇರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳ ಪೋಷಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ತರು, ಪುಟಾಣಿ ಮಕ್ಕಳು, ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

Post a Comment

0 Comments