ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಆರ್ಟಿಫೀಶಿಯಲ್‌ ಇಂಟಲ್‌ಜೆನ್ಸ್‌ (AI) ಕಾರ್ಯಾಗಾರ .

ಜಾಹೀರಾತು/Advertisment
ಜಾಹೀರಾತು/Advertisment

 

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಆರ್ಟಿಫೀಶಿಯಲ್‌ ಇಂಟಲ್‌ಜೆನ್ಸ್‌ (AI) ಕಾರ್ಯಾಗಾರ 

ಮೂಡುಬಿದಿರೆ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್‌.ಕೆ.ಪಿ.ಎ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ (ರಿ.) ಇದರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಎಸ್.ಕೆ.ಪಿ.ಎ. ಸದಸ್ಯರಿಗಾಗಿ ಮೇ 21ರಂದು ಮೂಡುಬಿದಿರೆಯ ಏನಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಭವನದಲ್ಲಿ ಆರ್ಟಿಫೀಶಿಯಲ್‌ ಇಂಟಲ್‌ಜೆನ್ಸ್‌ (AI) ಕಾರ್ಯಾಗಾರ ನಡೆಯಿತು. 


ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಡಿʼಸೋಜಾ ದೀಪ ಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ತಂತ್ರಜ್ಞಾನ ಮುಂದುವರಿದಂತೆ ನಾವು ಅದೇ ವೇಗದಲ್ಲಿ ಮುಂದುವರಿಯಬೇಕು. ಹಾಗಾದಲ್ಲಿ ಮಾತ್ರ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ. ಛಾಯಾಗ್ರಾಹಣ ಕ್ಷೇತ್ರದಲ್ಲಿ ತಂತ್ರಜ್ಞಾನವು ಅತಿ ಅವಶ್ಯವಾಗಿದ್ದು, ಹೊಸತನಕ್ಕೆ ಛಾಯಾಗ್ರಾಹಕರು ತಮ್ಮನ್ನು ಒಗ್ಗಿಕೊಳ್ಳಬೇಕೆಂದರು. 


ಎಸ್.ಕೆ.ಪಿ.ಎ. ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ನಮ್ಮ ಛಾಯಾಗ್ರಹಣ ಕ್ಷೇತ್ರದಲ್ಲೂ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ (AI) ಪರಿಚಯವಾಗುತ್ತಿದೆ. ಛಾಯಾಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.  


ಪ್ರಖ್ಯಾತ ತರಬೇತಿದಾರ ಬಾಬು ಎಸ್. ಮೈಸೂರ್ ಅವರು ಆರ್ಟಿಫೀಶಿಯಲ್‌ ಇಂಟಲ್‌ಜೆನ್ಸ್‌ (AI) ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸಂಚಾಲಕ ಕರುಣಾಕರ್‌ ಕಾನಂಗಿ, ಉಪಾಧ್ಯಕ್ಷ ರಮೇಶ್‌ ಕಲಾಶ್ರೀ, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಭಾರದ್ವಾಜ್‌, ಹರೀಶ್‌ ಪಿ.ಕೆ., ಹರೀಶ್‌ ಸುಳ್ಯ ಉಪಸ್ಥಿತರಿದ್ದರು. ಮೂಡುಬಿದಿರೆ ವಲಯ ಅಧ್ಯಕ್ಷ ರಾಜೇಶ್ ಪ್ರಾರ್ಥಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಲ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ವಂದಿಸಿದರು.

Post a Comment

0 Comments