ಎಲ್ಲೆಂದರಲ್ಲಿ ಕಸ ಬಿಸಾಡಿದವರಿಗೆ ದಂಡ ವಿಧಿಸಿದ ಪಾಲಡ್ಕದ ಪಿಡಿಒ

ಜಾಹೀರಾತು/Advertisment
ಜಾಹೀರಾತು/Advertisment

 ಎಲ್ಲೆಂದರಲ್ಲಿ ಕಸ ಬಿಸಾಡಿದವರಿಗೆ  ದಂಡ ವಿಧಿಸಿದ ಪಾಲಡ್ಕದ ಪಿಡಿಒ

ಮೂಡುಬಿದಿರೆ: ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಕಸ ಬಿಸಾಡುವವರಿಗೆ  ಪಾಲಡ್ಕ ಗ್ರಾಮ ಪಂಚಾಯತ್  ಅಭಿವೃದ್ಧಿ ಅಧಿಕಾರಿ ದಂಡ ವಿಧಿಸಿದ್ದು ಮಾತ್ರವಲ್ಲದೇ ಯಾರು ಕಸ ಬಿಸಾಡಿದ್ದಾರೋ ಅವರಿಂದಲೇ  ಕಸವನ್ನು ಹೆಕ್ಕಿಸಿದ  ಘಟನೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ   ಕಡಂದಲೆ ಗ್ರಾಮ ಪೂಪಾಡಿಕಲ್ಲಿನಲ್ಲಿ ನಡೆದಿದೆ.



ಪಾಲಡ್ಕ ಹಾಗೂ ಕಡಂದಲೆ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಕಳೆದ ವಾರ ಪಂಚಾಯತ್ ವತಿಯಿಂದ ಕಸವನ್ನು ಸಂಗ್ರಹಿಸಿ, ಶುಚಿಗೊಳಿಸಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಪೂಪಾಡಿ ಕಲ್ಲಿನ ರಸ್ತೆ ಬದಿಯಲ್ಲಿ ಮತ್ತೆ ಕಸ ಕಾಣಿಸಿಕೊಂಡಿದೆ. ಸ್ಥಳೀಯ ಪತ್ರಕರ್ತರೋರ್ವರು  ಕಸವನ್ನು ಪರಿಶೀಲಿಸಿದಾಗ, ಅದರಲ್ಲಿ ಆನ್ಲೈನ್ ವಸ್ತುವನ್ನು ಬುಕ್ ಮಾಡಿದ ಖಾಲಿ ಬಾಕ್ಸ್, ಮದುವೆ ಕಾಗದ ಸಿಕ್ಕಿದೆ. ಅದರಲ್ಲಿ ಸಿಕ್ಕ ಹೆಸರು, ದೂರವಾಣಿ ಸಂಖ್ಯೆ, ವಿಳಾಸವನ್ನು ಆಧರಿಸಿ ಕಸ ಬಿಸಾಡಿದವರ ವಿರುದ್ಧ ಕ್ರಮವಹಿಸಲು ಪಂಚಾಯತ್  ಮುಂದಾಗಿತ್ತು ಆದರೆ ದೂರವಾಣಿ ಸಂಪರ್ಕಿಸಿದಾಗ ಕಾಲ್ ರಿಸೀವ್ ಮಾಡದ ಕಾರಣ, ಪಿಡಿಒ ಕಸ ಬಿಸಾಡಿದವರ ಮನೆಗೆ ತೆರಳಿ, ಸದ್ರಿ ಜಾಗಕ್ಕೆ ಅವರನ್ನು ಕರೆದುಕೊಂಡು ಹೋಗಿ ಕಸ ಹೆಕ್ಕಿಸಿದ್ದಾರೆ. ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದು ಮುಂದೆ ಪಂಚಾಯತ್ ಕಸದ ವಾಹನಕ್ಕೆ ಕಸವನ್ನು ನೀಡುವಂತೆ ಸೂಚಿಸಲಾಯಿತು.

ಪಾಲಡ್ಕ ಪಂಚಾಯತ್ ಗಾಂಧಿ ಪುರಸ್ಕಾರವನ್ನು ಪಡೆದಿದೆ. ಗ್ರಾಮದ ಶುಚಿತ್ವಕ್ಕೆ ಹೆಚ್ಷಿನ ಆದ್ಯತೆ ನೀಡುತ್ತೇವೆ. ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಯಾರೇ ಕಸ ಬಿಸಾಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದೆ ಪೂಪಾಡಿಕಲ್ಲು ಪ್ರದೇಶದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗುವುದು ಎಂದು ಪಿಡಿಒ ರಕ್ಷಿತಾ ಡಿ. ತಿಳಿಸಿದ್ದಾರೆ.

Post a Comment

0 Comments